ಕಿರಿಕಿರಿ ಪ್ರತ್ಯುತ್ತರಗಳಿಂದ ದೂರವಿರಲು ಹೊಸ ಟ್ವಿಟರ್ ವೈಶಿಷ್ಟ್ಯ
ಹೊಸದಿಲ್ಲಿ, ಅಗಸ್ಟ್ 13: ಇದೀಗ ಟ್ವಿಟರ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ, ಅದು ನಿಮ್ಮ ಟ್ವೀಟ್‌ಗಳಿಗೆ ಪ್ರತ್ಯುತ್ತರಗಳನ್ನು ಯಾರು ಮಾಡಬಹುದು ಎಂಬುದನ್ನು ನಿರ್ಧರಿಸಲು ಅವಕಾಶ ಮಾಡಿಕೊಡುತ್ತದೆ. ಹೊಸ ಆಯ್ಕೆ ಈಗ ಬಳಕೆದಾರರಿಗೆ ಲಭ್ಯವಿದ್ದು, ಈ ಮೂಲಕ ಬಳಕೆದಾರರು ಅನಾಮಧೇಯ ವ್ಯಕ್ತಿಗಳಿಂದ ಬರುವ ಪ್ರತ್ಯುತ್ತರಗಳನ್ನು ತಪ್ಪಿಸಬಹುದಾಗಿದೆ.
ಟ್ವಿಟರ್ ನ ಹೊಸ ವೈಶಿಷ್ಟ್ಯ ನೀವು ಪೋಸ್ಟ್ ಮಾಡುವ ಟ್ವೀಟ್‌ಗಳು ಮೇಲೆ ಉತ್ತಮ ನಿಯಂತ್ರಣವನ್ನು ಹೊಂದಲು ಅನುವು ಮಾಡಿಕೊಡುತ್ತದೆ. ಇದರಿಂದ ಬಳಕೆದಾರರಿಗೆ ಟ್ವಿಟರ್‌ನಲ್ಲಿನ ಅವರ ಪೋಸ್ಟ್‌ಗಳಿಗೆ ಪ್ರಮುಖವಲ್ಲದ ಮತ್ತು ಕಿರಿಕಿರಿಗೊಳಿಸುವ ಪ್ರತ್ಯುತ್ತರಗಳಿಂದ ದೂರವಿರಲು ಸಾಧ್ಯವಾಗುತ್ತದೆ.

ಮೈಕ್ರೋ-ಬ್ಲಾಗಿಂಗ್ ಸೈಟ್ ಬಳಕೆದಾರರಿಗೆ ಆಯ್ಕೆ ಮಾಡಲು ಮೂರು ಆಯ್ಕೆಗಳನ್ನು ಒದಗಿಸುತ್ತದೆ. ಮೂರು ಆಯ್ಕೆಗಳಲ್ಲಿ ಯಾವುದನ್ನಾದರೂ ಸಕ್ರಿಯಗೊಳಿಸುವುದು ಹೇಗೆ ಎಂಬುದು ಇಲ್ಲಿದೆ:
ಹೊಸ ಟ್ವಿಟರ್ ವೈಶಿಷ್ಟ್ಯ
ಮೈಕ್ರೋ-ಬ್ಲಾಗಿಂಗ್ ಸೈಟ್ ಬಳಕೆದಾರರಿಗೆ ಆಯ್ಕೆ ಮಾಡಲು ಮೂರು ಆಯ್ಕೆಗಳನ್ನು ಒದಗಿಸಿದ್ದು, ‘ಪ್ರತಿಯೊಬ್ಬರೂ ಉತ್ತರಿಸಬಹುದು’, ‘ನೀವು ಅನುಸರಿಸುವ ಜನರು ಮತ್ತು ನೀವು ಉಲ್ಲೇಖಿಸುವ ಜನರು ಮಾತ್ರ ಉತ್ತರಿಸಬಹುದು’ ಮತ್ತು ‘ಯಾರೂ ಇಲ್ಲ’ ಎಂಬ ಆಯ್ಕೆಗಳನ್ನು ನೀಡಿದೆ.
ಅಪ್ಲಿಕೇಶನ್ ಆವೃತ್ತಿಯು ಮೂರು ಆಯ್ಕೆಗಳೊಂದಿಗೆ ಪಾಪ್-ಅಪ್ ಕಾಣಿಸುತ್ತಿದ್ದರೆ, ವೆಬ್ ಆವೃತ್ತಿಯು ಆಯ್ಕೆಗಳಿಂದ ಆಯ್ಕೆ ಮಾಡಲು ಡ್ರಾಪ್-ಡೌನ್ ಮೆನುವನ್ನು ಪ್ರದರ್ಶಿಸುತ್ತದೆ
ಹೊಸ ವೈಶಿಷ್ಟ್ಯವು ಟ್ವಿಟರ್‌ನ ಆಂಡ್ರಾಯ್ಡ್, ಐಒಎಸ್ ಮತ್ತು ವೆಬ್ ಆವೃತ್ತಿಯಲ್ಲಿ ಲಭ್ಯವಿದೆ.








