ಬ್ರಿಟನ್ , ಆಫ್ರಿಕಾ ಆಯ್ತು, ಈಗ ಜಪಾನ್ ನಲ್ಲಿ ಮತ್ತೊಂದು ಹೊಸ ತಳಿ ಕೊರೊನಾ ವೈರಸ್ ಪತ್ತೆ..!
ಜಪಾನ್: ಬ್ರಿಟನ್ ನಲ್ಲಿ ಹೊಸ ತಳಿ ಕೊರೊನಾ ಪತ್ತೆಯಾಗಿ ಅತಂಕ ಹೆಚ್ಚಿಸಿದ ಬೆನ್ನಲ್ಲೇ ಆಫ್ರಿಕಾದಲ್ಲೂ ಮತ್ತೊಂದು ರೂಪಾಂತರ ವೈರಸ್ ಪತ್ತೆಯಾಗಿ ವಿಶ್ವದ ಜನರ ನಿದ್ದಿಗೆಡಿಸಿತ್ತು. ಇದೀಗ ಇದರ ಬೆನ್ನಲ್ಲೇ ಜಪಾನ್ ನಲ್ಲೂ ಹೊಸ ರೂಪಾಂತರಿ ಕೊರೊನಾ ವೈರಸ್ ಪತ್ತೆಯಾಗಿದೆ..
ಇಂಗ್ಲೆಂಡ್ ನಲ್ಲಿ 30 ಲಕ್ಷ ದಾಟಿದ ಕೊರೊನಾ ಕೇಸ್ : 20 ದಿನಗಳಲ್ಲಿ 12 ಲಕ್ಷಕ್ಕೆ ಏರಿಕೆ
ಈ ಕುರಿತು ಜಪಾನ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಇನ್ಫೆಕ್ಷಿಯಸ್ ಡಿಸೀಸಸ್ ಮಾಹಿತಿ ನೀಡಿದೆ. ಬ್ರಿಟನ್ ಮಾದರಿಯಲ್ಲಿಯೇ ಆದರೆ ಹೊಸ ರೂಪದಲ್ಲಿ ಜಪಾನ್ ನಲ್ಲಿ ಕೂಡ ಕೊರೊನಾ ವೈರಸ್ ಹೊಸ ಆವೃತ್ತಿ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದೆ. ಬ್ರೆಝಿಲ್ ನಿಂದ ಬಂದ ನಾಲ್ವರು ಪ್ರಯಾಣಿಕರಲ್ಲಿ ಹೊಸರೂಪದ ಕರೊನಾ ವೈರಸ್ ಪತ್ತೆಯಾಗಿರುವುದಾಗಿ ಜಪಾನ್ ನ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಮಾದರಿಯಲ್ಲಿಯೇ ಹೊಸ ಕರೊನಾ ವೈರಸ್ ಲಕ್ಷಣಗಳನ್ನು ಹೊಂದಿರುವ ಹೊಸ ರೂಪಾಂತರಿಯೊಂದು ಜಪಾನ್ ನಲ್ಲಿ ಪತ್ತಯಾಗಿದೆ. ಇದು ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾಕ್ಕಿಂತ ಭಿನ್ನವಾದದ್ದೋ ಅಥವಾ ಅದೇ ವೈರಸ್ ಇಲ್ಲಿಯೂ ಪತ್ತೆಯಾಗಿದೆಯೋ ಎಂಬ ಬಗ್ಗೆ ಇನ್ನೂ ಪ್ರಯೋಗಾಲಯದಿಂದ ವರದಿ ಬರಬೇಕಿದೆ. ಆದರೆ ಮೇಲ್ನೋಟಕ್ಕೆ ಇದೊಂದು ಹೊಸ ಮಾದರಿಯ ಕರೊನಾ ಇರಬಹುದು ಎಂದು ಶಂಕಿಸಲಾಗಿದೆ.
ಭಾರತದಲ್ಲಿ ಒಂದೇ ದಿನ 16,311 ಹೊಸ ಕೊರೊನಾ ಪಾಸಿಟಿವ್ ಕೇಸ್ ಪತ್ತೆ..!
ವಿಶ್ವ ಆರೋಗ್ಯ ಸಂಸ್ಥೆಗೂ ಈ ಕುರಿತು ಮಾಹಿತಿ ನೀಡಲಾಗಿದ್ದು,ರೂಪಾಂತರ ವೈರಸ್ ಕುರಿತು ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎನ್ ಐಐಡಿ ತಿಳಿಸಿದೆ. ಈಗಾಗಲೇ ಬ್ರಿಟನ್ ವೈರಸ್ ಆತಂಕದಿಂದ ಜಗತ್ತಿನ ಜನರಲ್ಲಿ ಆತಂಕ ಹೆಚ್ಚಾಗಿದೆ. ಇದರ ಬೆನ್ನಲ್ಲೇ ದಿನೇ ದಿನೇ ಕೊರೊನಾ ಹೊಸ ರೂಪ ಪಡೆದುಕೊಳ್ತಾಯಿರೋದು ನಿಜಕ್ಕೂ ಗಂಭೀರ ಹಾಗೂ ಆಘಾತಕಾರಿ ವಿಚಾರವಾಗಿದೆ. ಒಂದೆಡೆ ಸೋಂಕಿತರ ಸಂಖ್ಯೆ ಕಡಿಮೆಯಾಗ್ತಿದೆ ಅನ್ನೋ ನಿರೀಕ್ಷೆಯಲ್ಲಿದ್ದ ವಿಶ್ವದ ಅನೇಕ ರಾಷ್ಟ್ರಗಳಿಗೆ ಇದೀಗ ದೊಡ್ಡ ತಲೆ ನೋವು ಶುರುವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








