New Year 2022: ನ್ಯೂಇಯರ್ ಗೆ ಈ ರೀತಿ ಮಾಡಿದ್ರೆ ಒಳ್ಳೆಯದಾಗುತ್ತದೆ
ಕೊರೊನಾ ಪುಣ್ಯ ಎಂಬಂತೆ 2020, 21 ರಲ್ಲಿ ಜನರು ಸಾಕಷ್ಟು ಸಂಕಷ್ಟಗಳನ್ನ ಅನುಭವಿಸಿದ್ದಾರೆ. ಅದೆಷ್ಟೋ ಮಂದಿ ತನ್ನ ನೆರೆಹೊರೆಯವರನ್ನ ಕಳೆದುಕೊಂಡಿದ್ದಾರೆ.
ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದ್ದು, ಹೊಸ ಭರವಸೆಯೊಂದಿಗೆ ಜನರು ಎದುರು ನೋಡುತ್ತಿದ್ದಾರೆ. ಈ ಮಧ್ಯೆ ಹೊಸ ವರ್ಷದ ದಿನದಂದು ಈ ರೀತಿ ಮಾಡುವುದರಿಂದ ವರ್ಷಪೂರ್ತಿ ಒಳ್ಳೆಯದಾಗುತ್ತದೆ ಎಂದು ವಿವಿಧ ದೇಶಗಳಲ್ಲಿ ವಿಭಿನ್ನ ಸಂಪ್ರದಾಯಗಳನ್ನು ಮತ್ತು ನಂಬಿಕೆಗಳನ್ನು ಅನುಸರಿಸುತ್ತಾರೆ.
ಸ್ಪೇನ್
ಈ ದೇಶದಲ್ಲಿ ಹೊಸ ವರ್ಷದ ಮೊದಲ ದಿನದಂದು 12 ದ್ರಾಕ್ಷಿಯನ್ನು ತಿನ್ನುವುದರಿಂದ ವರ್ಷಪೂರ್ತಿ ಸಂತೋಷವಾಗಿರುತ್ತೇವೆ ಎಂದು ನಂಬುತ್ತಾರೆ. ಈ ಸಂಪ್ರದಾಯವು 1909 ರಲ್ಲಿ ಪ್ರಾರಂಭವಾಯಿತು.
ಬ್ರೆಜಿಲ್
ಬ್ರೆಜಿಲ್ ಜನರು ಸಮುದ್ರದ ಅಲೆಗಳಲ್ಲಿ ಬಿಳಿ ಹೂವುಗಳನ್ನು ಎಸೆಯುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಹೂವುಗಳ ಜೊತೆಗೆ, ಅನೇಕರು ಸುಗಂಧ ದ್ರವ್ಯಗಳು, ಆಭರಣಗಳು, ಬಾಚಣಿಗೆಗಳು ಮತ್ತು ಲಿಪ್ಸ್ಟಿಕ್ ಅನ್ನು ಸಮುದ್ರಕ್ಕೆ ಎಸೆಯುತ್ತಾರೆ. ಹೊಸ ವರ್ಷದ ದಿನದಂದು ಸಮುದ್ರ ದೇವತೆ ‘ಯೆಮಂಜ’ಗೆ ಕಾಣಿಕೆಯನ್ನು ಅರ್ಪಿಸಿದ್ರೆ ತಮ್ಮ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಅನ್ನೋ ನಂಬಿಕೆ ಇಲ್ಲಿನ ಜನರದ್ದು.
ಡೆನ್ಮಾರ್ಕ್
ಡಿಸೆಂಬರ್ 31 ರ ರಾತ್ರಿ, ಈ ದೇಶದ ಜನರು ನೆರೆಹೊರೆಯವರ ಮನೆಯ ಮೇಲೆ ಹಳೆಯ ತಟ್ಟೆಗಳು ಮತ್ತು ಚಮಚಗಳನ್ನು ಎಸೆಯುತ್ತಾರೆ. ಜನವರಿ 1 ರ ಬೆಳಿಗ್ಗೆ ಮನೆಯ ಬಾಗಿಲನ್ನು ತೆರೆಯುತ್ತಿದ್ದಂತೆ ಎಷ್ಟು ಮುರಿದಿರುವ ಪಾತ್ರೆಗಳು ಇರುತ್ತವೋ ಅಷ್ಟು ಅದೃಷ್ಠವೆಂದು ಭಾವಿಸುತ್ತಾರೆ.
ಇತರೆ ದೇಶಗಳಲ್ಲಿ..
ಥೈಲ್ಯಾಂಡ್ನಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ದುಷ್ಟಶಕ್ತಿಗಳನ್ನು ಹೆದರಿಸುವುದು ವಾಡಿಕೆ.
ದಕ್ಷಿಣ ಆಫ್ರಿಕಾದ ಈಕ್ವೆಡಾರ್ನಲ್ಲಿ ಜನರು ಸೆಲೆಬ್ರಿಟಿಗಳ ಪ್ರತಿಕೃತಿಗಳನ್ನು ಸುಡುತ್ತಾರೆ. .
ಒಟ್ಟಾರೆ ಯಾವುದೇ ನಂಬಿಕೆ ಇರಲಿ.. ಮಾನಸಾವಾಚಕರ್ಮನಾ ಇತರರಿಗೆ ತೊಂದರೆಯಾಗದಂತೆ, ಎಲ್ಲರ ಆನಂದವನ್ನ ನಮ್ಮ ಆನಂದ ಎಂದು ಭಾವಿಸಿದರೆ ಅದು ಯಾವುದೇ ವರ್ಷ ಆಗಿರಲಿ, ಅದೃಷ್ಟ ನಮ್ಮ ಜೊತೆಗಿರುತ್ತದೆ. ‘ಯದ್ಭವಂ ತದ್ಭವತಿ’ ಎಂಬ ಮಾತಿನ ಅರ್ಥವೂ ಇದೇ ಆಗಿದೆ.