ಹೊಸ ವರ್ಷಕ್ಕೆ ಜಿಯೋ ಬಳಕೆದಾರರಿಗೆ ಭರ್ಜರಿ ಗಿಫ್ಟ್
ಮುಂಬೈ : ಜಿಯೋ ಟೆಲಿಕಾಂ ಸಂಸ್ಥೆ ತನ್ನ ಬಳಕೆದಾರರಿಗೆ ಹೊಸ ವರ್ಷದ ಗಿಫ್ಟ್ ನೀಡಿದೆ.
2021 ಜನವರಿ 1 ರಿಂದ ಅಂದ್ರೆ ನಾಳೆಯಿಂದ ಭಾರತದಲ್ಲಿ ಜಿಯೋದಿಂದ ಇತರ ಟೆಲಿಕಾಂ ಕಂಪನಿಗಳಿಗೆ ಹೋಗುವ ಎಲ್ಲ ಕರೆಗಳನ್ನು ಉಚಿತಗೊಳಿಸಿದೆ.
ಸದ್ಯ ಜಿಯೋದಿಂದ ಜಿಯೋ ಸಿಮ್ ಗೆ ಹೋಗುವ ಕರೆಗಳು ಮಾತ್ರ ಉಚಿತವಾಗಿದ್ದು,
ಇತರ ಟೆಲಿಕಾಂ ಕಂಪನಿಯ ಸಿಮ್ ಗೆ ಹೋಗುವ ಕರೆಗಳಿಗೆ ಪ್ರತಿ ನಿಮಿಷಕ್ಕೆ ಆರು ಪೈಸೆ ದರ ಇತ್ತು. ಆದ್ರೆ ಇದೀಗ ಈ ದರವನ್ನು ತೆಗೆದು ಹಾಕಿದೆ.
ಅಂದಹಾಗೆ ದೇಶದಲ್ಲಿ ಜಿಯೋ ಸೇವೆ ಆರಂಭಗೊಂಡಾಗ ಬೇರೆ ಟೆಲಿಕಾಂ ಕಂಪನಿಗಳಿಗೆ ಹೋಗುವ ಕರೆಗೆ ದರ ವಿಧಿಸುತ್ತಿರಲಿಲ್ಲ.
ಆದ್ರೆ 2019 ಅಕ್ಟೋಬರ್ 9 ರಂದು ಜಿಯೋ ಬೇರೆ ಟೆಲಿಕಾಂ ಕಂಪನಿಗಳಿಗೆ ಹೋಗುವ ಕರೆಗಳಿವೆ ಪ್ರತಿ ನಿಮಿಷಕ್ಕೆ ಆರು ಪೈಸೆ ದರ ವಿಧಿಸಲಾಗುವುದು ಎಂದು ಪ್ರಕಟಿಸಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









