New Zealand : ಭೂಕಂಪ ಮತ್ತ ಚಂಡಮಾರುತ್ತಕ್ಕೆ ತತ್ತರಿಸಿದ ನ್ಯೂಜಿಲೆಂಡ್…
ಟರ್ಕಿ – ಸಿರಿಯಾ ಪ್ರಕೃತಿ ವಿಕೋಪದ ನಡುವೆ, ನ್ಯೂಜಿಲೆಂಡ್ ದೇಶದಲ್ಲೂ ಭೂಮಿ ಕಂಪಿಸುತ್ತಿದೆ. ಇತ್ತೀಚೆಗೆ, ನ್ಯೂಜಿಲೆಂಡ್‌ನ ಗಿಸ್ಬೋರ್ನ್ ನಗರದಲ್ಲಿ ಭೂಮಿ ಕಂಪಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.1ರಷ್ಟು ದಾಖಲಾಗಿದೆ. ಇದಕ್ಕೂ ಮುನ್ನ 4.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಿಂದಾಗಿ ನ್ಯೂಜಿಲೆಂಡ್ ನಲ್ಲಿ ಸುನಾಮಿ ಭೀತಿ ಕಾಡುತ್ತಿದೆ.
ಮತ್ತೊಂದೆಡೆ, ನ್ಯೂಜಿಲೆಂಡ್ ಗೇಬ್ರಿಯಲ್ ಚಂಡಮಾರುತಕ್ಕೆ ಸಿಲುಕಿಕೊಂಡಿದೆ. ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಉಂಟಾಗಿರುವ ಭಾರಿ ಚಂಡಮಾರುತದಿಂದ ನ್ಯೂಜಿಲೆಂಡ್ ತತ್ತರಿಸಿದೆ. ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಭಾರಿ ಗಾಳಿ ಬೀಸುತ್ತಿದೆ, ಆಕ್ಲೆಂಡ್ ಸೇರಿದಂತೆ ಹಲವು ನಗರಗಳು ಚಂಡಮಾರುತಕ್ಕೆ ತುತ್ತಾಗಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ನ್ಯೂಜಿಲೆಂಡ್ ನ ಉತ್ತರ ಭಾಗಗಳಲ್ಲಿ ಗಂಟೆಗೆ 250 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಹಲವೆಡೆ ಮರಗಳು ಧರೆಗುರುಳಿದ್ದು, ವಾಹನಗಳು ನಾಶವಾಗಿವೆ. 46 ಸಾವಿರ ಮನೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಹವಾಮಾನ ವೈಪರೀತ್ಯದಿಂದಾಗಿ ವಿಮಾನಗಳ ಹಾರಾಟವನ್ನೂ ರದ್ದುಗೊಳಿಸಲಾಗಿದೆ. ಒಟ್ಟು 509 ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಜನರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
New Zealand : Earthquake and storm shook New Zealand…








