ದೆಹಲಿಯಲ್ಲಿ ಲಾಕ್‍ಡೌನ್ ನಲ್ಲಿ ಸಡಿಲಿಕೆ – ಮಾಲ್, ಮೆಟ್ರೋ, ಶಾಪಿಂಗ್ ಸೆಂಟರ್ ಗಳು ಓಪನ್
ನವದೆಹಲಿ: ರಾಷ್ಟ್ರ ರಾಜದಾನಿ ದೆಹಲಿಯಲ್ಲಿ ಕೊರೊನಾ 2ನೇ ಅಲೆ ತಿಂಗಳ ಹಿಂದೆ ತಾಂಡವವಾಡಿತ್ತು.. ಇದೀಗ ಸೋಂಕಿತರ ಸಂಖ್ಯೆ ಇಳಿಮುಖವಾಗ್ತಿದ್ದು, ಸಕ್ರಿಯ ಕೇಸ್ ಗಳು ಸಮ ಸಂಪೂರ್ಣ ಇಳಿಮುಖವಾಗಿದೆ.. ಹೀಗಾಗಿ ದೆಹಲಿ ಸರ್ಕಾರ ಕೊರೊನಾ ಲಾಕ್ ಡೌನ್ ನಿಯಮಾವಳಿಗಳಲ್ಲಿ ಕೆಲವೊಂದು ಸಡಿಲಿಕೆಗೊಳಿಸಿದೆ.
ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಕಷ್ಟಕರವಾದ ಪರಿಸ್ಥಿತಿ ಸುಧಾರಿಸುತ್ತಿದೆ ಹೀಗಾಗಿ ಲಾಕ್‍ಡೌನ್ ಮುಂದುವರೆಯುತ್ತದೆ. ಆದರೆ ಕೊಂಚ ಮಟ್ಟಿಗೆ ಸಡಿಲ ಗೊಳಿಸುತ್ತಿದ್ದೇವೆ ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ.
ಮಾಲ್‍ಗಳು ಮತ್ತು ಶಾಪಿಂಗ್ ಕೇಂದ್ರಗಳು ಬೆಸ-ಸಮ ಆಧಾರದ ಮೇಲೆ ತೆರೆಯಲ್ಪಡುತ್ತವೆ. ಒಂದು ದಿನ ಅರ್ಧ ಅಂಗಡಿಗಳು, ಇನ್ನೊಂದು ಅರ್ಧ ಮರುದಿನ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಅಗತ್ಯ ವಸ್ತುಗಳ ಅಂಗಡಿಗಳು ಮತ್ತು ರಸಾಯನಿಕ ಅಂಗಡಿಗಳನ್ನು ಎಲ್ಲಾ ದಿನಗಳಲ್ಲಿ ತೆರೆಯಬಹುದು. ಬೆಸ-ಸಮ ನಿಯಮವು ಅವರಿಗೆ ಅನ್ವಯಿಸುವುದಿಲ್ಲ.
ಖಾಸಗಿ ಕಚೇರಿಗಳು ಶೇಕಡಾ 50 ರಷ್ಟು ಉದ್ಯೋಗಿಗಳ ಮಿತಿಯಲ್ಲಿ ಮಾತ್ರ ಕೆಲಸವನ್ನು ಆರಂಭಿಸ ಬಹುದಾಗಿದೆ. ವರ್ಕ್ ಫ್ರಮ್ ಹೋಮ್ ಮಾಡುತ್ತಿರುವವರು ಇದನ್ನು ಮುಂದುವರಿಸಿ. ಸಾರ್ವಜನಿಕ ವಲಯದ ಕಚೇರಿಗಳಲ್ಲಿ ಎ ವರ್ಗ ಉದ್ಯೋಗಿಗಳು ಎಲ್ಲಾ ದಿನಗಳಲ್ಲಿ ಕೆಲಸ ಮಾಡಬಹುದು, ಆದರೆ ಅವರ ಅಡಿಯಲ್ಲಿರುವ ಎಲ್ಲಾ ವರ್ಗಗಳು ಕೇವಲ 50 ಪ್ರತಿಶತದಷ್ಟು ಸಾಮಥ್ರ್ಯದ ಜನರು ಮಾತ್ರ ಕೆಲಸ ಮಾಡಿ. ಮೆಟ್ರೋ ಸಹ ಸೇ.50 ರಷ್ಟು ಆಸನ ಸಾಮಥ್ರ್ಯದಲ್ಲಿ ಚಲಿಸಲಿದೆ.