ಬಂದೂಕಿನ ಜೊತೆ ಸೆಲ್ಫಿ – ಜೀವ ಕಳೆದುಕೊಂಡ ನವವಿಹಾಹಿತೆ..!
ಉತ್ತರಪ್ರದೇಶ : ಸೆಲ್ಫಿ ಕ್ರೇಜ್ ಗೆ ಅದೆಷ್ಟು ಜೀವಗಳು ಹೋಗಿರುವ ಉದಾಹರಣೆಗಳು ಕಣ್ಮುಂದಿವೆ.. ಆದ್ರೂ ಇಂತಹ ಘಟನೆಗಳು ಆಗಾಗ ನಡೆಯುತ್ತಲೇ ಇವೆ.. ಶೋಕಿಗೆ ಬಿದ್ದು ಅನೇಕರು ಜೀವ ಕಳೆದುಕೊಂಡಿದ್ದಾರೆ.. ಇಂತಹದ್ದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದುಹೋಗಿದೆ.. ನವವಿವಾಹಿತೆಯೊಬ್ರು ಬಂದೂಕಿನ ಜತೆ ಸೆಲ್ಫಿ ತೆಗೆದುಕೊಳ್ಳುವ ಹುಚ್ಚಾಟಕ್ಕೆ ಬಿದ್ದು ಜೀವನದ ಜೊತೆಗೆ ಕೈ ತೊಳೆದುಕೊಂಡಿದ್ದಾರೆ.. 26 ವರ್ಷದ ರಾಧಿಕಾ ಗುಪ್ತಾ ನವವಾಹಿತೆ ಸಾವನ್ನಪ್ಪಿದ್ದಾರೆ. ಈಕೆ ತನ್ನ ಮಾವನ ಸಿಂಗಲ್ ಬ್ಯಾರೆಲ್ ಬಂದೂಕಿನೊಂದಿಗೆ ಸೆಲ್ಫಿ ಕ್ಲಿಕ್ಕಿಸುವಾಗ ಈ ದುರಂತ ನಡೆದಿದೆ.
ಕೇವಲ ಜೀನ್ಸ್ – ಟೀ ಶರ್ಟ್ ಧರಿಸಿದ್ದಕ್ಕೆ ಹುಡುಗಿಯನ್ನು ಕೊಂದ ಪಾಪಿಗಳು..!
ಬಂದೂಕಿನಲ್ಲಿ ಗುಂಡುಗಳು ತುಂಬಿರುವುದು ರಾಧಿಕಾ ಗುಪ್ತಾಗೆ ತಿಳಿದಿರಲಿಲ್ಲ.. ಹೀಗಾಗಿ ಸೆಲ್ಫಿಗೆ ಪೋಸ್ ನೀಡುವಾಗ ನಳಿಕೆಯನ್ನು ಎಳೆದಿದ್ದಾರೆ. ಗುಂಡು ಅವರ ಕುತ್ತಿಗೆಯನ್ನು ಹೊಕ್ಕಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದ್ರೂ ಅಷ್ಟರಲ್ಲಿ ಆಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಮೃತ ರಾಧಿಕಾ 2 ತಿಂಗಳ ಹಿಂದಷ್ಟೇ ಆಕಾಶ್ ಗುಪ್ತಾ ಎಂಬಾತನ ಜೊತೆಗೆ ದಾಂಪತ್ಯಕ್ಕೆ ಕಾಲಿಟ್ಟಿದ್ದರು.
ಆದ್ರೆ ಮಹಿಳೆಯ ತಂದೆ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ.. ಹೌದು ಮದುವೆಯಲ್ಲಿ ವರದಕ್ಷಿಣೆ ಎಂದು 2 ಲಕ್ಷ ರು ಹಣ ನೀಡಲಾಗಿತ್ತು, ಆದರೆ ಇದರಲ್ಲಿ ಏನೋ ಸಂಚು ನಡೆದಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಬಂದೂಕು ಮತ್ತು ಮೊಬೈಲ್ ಫೋನ್ ಅನ್ನು ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆ ಫೋನ್ ನಲ್ಲಿ ಗುಂಡು ಹಾರುವ ಕೆಲವೇ ಸೆಕೆಂಡುಗಳ ಮೊದಲು ತೆಗೆದುಕೊಂಡಿದ್ದ ಸೆಲ್ಫಿ ದೊರಕಿದೆ.








