ತರಗತಿಗಳನ್ನ ಮತ್ತೆ ತೆರೆಯಲು ರಾಜ್ಯ ಸರ್ಕಾರ ನಿರ್ಧಾರ..???
ಹಿಜಾಬ್ ಮತ್ತು ಕೆಸರಿ ಶಾಲು ವಿವಾದಿಂದ ಸ್ಥಗಿತಗೊಂಡಿದ್ದ ತರಗತಿಗಳನ್ನ ಮತ್ತೆ ತೆರೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಪೊಲಿಸ್ ಭದ್ರತೆಯಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ರಾಜ್ಯದಲ್ಲಿ ಹಿಜಬ್ – ಕೇಸರಿ ಶಾಲು ವಿವಾದ – ವಿಚಾರಣೆ ನಿರಾಕರಿಸಿದ ‘ಸುಪ್ರೀಂ’
ರಾಜ್ಯದಲ್ಲಿ ಹಿಜಬ್ – ಕೇಸರಿ ಶಾಲು ವಿವಾದದ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನ ಸುಪ್ರೀಂ ಕೋರ್ಟ್ ನಿರಾಕರಿಸಿದೆ… ಈ ಪ್ರಕರಣ ಹೈಕೋರ್ಟ್ ನಲ್ಲಿಯೇ ಮುಂದುವರೆಯಲಿ ಎಂದು ತಿಳಿಸಿದೆ.. ಸುಪ್ರೀಂ ಕೋರ್ಟ್ ಪ್ರತಿಯೊಬ್ಬ ನಾಗರಿಕನ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದಾಗಿ ಹೇಳಿದೆ. ಹೈಕೋರ್ಟ್ ನ ಮೌಖಿಕ ತೀರ್ಪನ್ನು ಪ್ರಶ್ನಿಸಿ ವಿದ್ಯಾರ್ಥನಿ ಇಂದು ಮನವಿ ಸಲ್ಲಿದ್ದರು.
ಜೇಮ್ಸ್ ಚಿತ್ರದ ಟೀಸರ್ ರಿಲೀಸ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಚಿತ್ರದ ಟೀಸರ್ ರಿಲೀಸ್ ಆಗಿದೆ. ಪುನೀತ್ ರಾಜ್ ಕುಮಾರ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.. 1 ನಿಮಿಷ 27 ಸೆಕೆಂಡ್ ಗಳ ಟೀಸರ್ ನಲ್ಲಿ ಜೆಮ್ಸ್ ಸಣ್ಣ ಪರಿಚಯವಿದೆ. ಪಕ್ಕಾ ಆಕ್ಷನ್ ಸ್ವೀಕ್ವೆನ್ಸ್ ಗಳಲ್ಲಿ ಪುನೀತ್ ಸ್ಟೈಲಿಸ್ ಆಗಿ ಕಾಣಿಸಿಕೊಂಡಿದ್ದಾರೆ. ಪಿ ಆರ್ ಕೆ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಟೀಸರ್ ರಿಲೀಸ್ ಮಾಡಿದ್ದಾರೆ.
NEET ಪರೀಕ್ಷೆ ವಿಳಂಬ
ನೀಟ್ ಪರೀಕ್ಷೆಗೆ ವಿಳಂಬವಾದ ಕಾರಣ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ದಂಡ ಶುಲ್ಕವನ್ನ ಹಿಂದಿರುಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ್ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಮಾಹಿತಿ ಕೊಟ್ಟಿದ್ದಾರೆ. ಈ ಬಾರಿಯ NEET ಪರೀಕ್ಷೆ ವಿಳಂಬವಾದ ಕಾರಣ ಈಗಾಗಲೇ ಎಂಜಿನಿಯರಿಂಗ್ ಸೀಟು ಪಡೆದು ಈಗ ವೈದ್ಯಕೀಯ ಕೋರ್ಸ್ಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿಧಿಸುತ್ತಿದ್ದ ದಂಡ ಶುಲ್ಕ ರದ್ದುಪಡಿಸಲಾಗಿದೆ. ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಶುಲ್ಕವನ್ನೂ ಹಿಂದಿರುಗಿಸಲು ಸೂಚಿಸಲಾಗಿದ್ದು ಈ ವಿನಾಯಿತಿ ಈ ವರ್ಷಕ್ಕೆ ಮಾತ್ರ ಅನ್ವಯವಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಹಿಜಬ್ ಹೋರಾಟ….
ರಾಜ್ಯದಲ್ಲಿ ಹಿಜಬ್ ನಿಷೇಧಕ್ಕೆ ವಿರೋಧಿಸಿ ಮಹಾರಾಷ್ಟ್ರದ ಮಾಲೆಗಾಂವ್ನಲ್ಲಿ ಗುರುವಾರ ಸಾವಿರಾರು ಮುಸ್ಲೀಂ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ‘ಜಾಮಿಯೆತ್ ಉಲೇಮಾ ಇ ಹಿಂದ್’ ಎಂಬ ಸಂಘಟನೆ ಈ ಪ್ರತಿಭಟನೆಯನ್ನು ನೇತೃತ್ವ ವಹಿಸಿದ್ದು, ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.. ಅಲ್ಲದೇ ‘ಹಿಜಾಬ್ ನಮ್ಮ ಹಕ್ಕು, ಹಿಜಾಬ್ ಮೇಲಿನ ನಿಷೇಧವನ್ನು ಹಿಂಪಡೆಯಿರಿ’ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಮಾಲೆಗಾಂವ್ ನಲ್ಲಿ ಫೆಬ್ರವರಿ 11 ರ ಶುಕ್ರವಾರವನ್ನು ‘ಹಿಜಾಬ್ ದಿನ’ ಎಂದು ಆಚರಿಸುವುದಾಗಿ ಘೋಷಿಸಿದ್ದಾರೆ.
ಕೋವಿಡ್ ಅಪ್ ಡೇಟ್ಸ್…
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 58,077 ಹೊಸ ಪ್ರಕರಣಗಳು ಪತ್ತೆಯಾಗಿದೆ. ಸಕ್ರಿಯ ಪ್ರಕರಣಗಳು 6,97,802 ಇದ್ದು , 1,50,407 ಲಕ್ಷ ಜನರು ಚೇತರಿಸಿಕೊಂಡಿದ್ದಾರೆ.. ನಿನ್ನೆ ಒಂದೇ ದಿನ 657 ಜನರು ಸಾವನ್ನಪ್ಪಿದ್ದಾರೆ..
ಕೇಂದ್ರ ಬಜೆಟ್ 2022 ರ ಬಗ್ಗೆ ಇರ್ಮಲಾ ಸೀತಾರಾಮನ್ ಮಾತು
ನವದೆಹಲಿ: 2022 ಬಜೆಟ್ ಮಂಡನೆ ಮೇಲಿನ ಚರ್ಚೆ ನಡೆಯುತ್ತಿದ್ದು, ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ನ ಅವರು ಈ ಬಜೆಟ್ ದೇಶದ ಆರ್ಥುಕತೆಗೆ ಸ್ಥಿರತೆ ಮತ್ತು ತೆರಿಗೆ ವಿಚಾರದಲ್ಲಿ ದೇಶಕ್ಕೆ ಸಹಾಯಕಾರಿಯಾಗಲಿದೆ ಎಂದು ವಿತ್ತ ಸಚಿವೆ ತಮ್ಮ ಬಜೆಟ್ ನ್ನು ಸಮರ್ಥಿಸಿಕೊಂಡರು. ಇಂದು ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ವಿರೋಧ ಪಕ್ಷಗಳು ಆರೋಪಕ್ಕೆ ಉತ್ತರಿಸಿದ ಅವರು ನಾವು ನಿರಂತರತೆ ಬೆಳವಣಿಗೆಗೆ ಸಹಕಾರಿಯಾಗುವಂಥ ಬಜೆಟ್ ಮಂಡಿಸಿದ್ದೇವೆ.ಆರ್ಥಿಕತೆಯು ಸಾಂಕ್ರಾಮಿಕ ರೋಗದಿಂದ ಹೊರಬರುವ ಹಂತದಲ್ಲಿ ನಿರಂತರತೆಯ ಹಂತವು ನಿರ್ಣಾಯಕವಾಗಿದೆ” ಎಂದು ಅವರು ಹೇಳಿದರು.
ಟಾಟಾ ಸನ್ಸ್ ಮಂಡಳಿಯ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್
ಟಾಟಾ ಸನ್ಸ್ ಮಂಡಳಿಯ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಅವರನ್ನ ಮುಂದಿನ ಐದು ವರ್ಷಗಳ ಅವಧಿಗೆ ಮರುನೇಮಕ ಮಾಡಲಾಗಿದೆ.
ಟಾಲಿವುಡ್ ಡ್ರಗ್ಸ್ ಕೇಸ್ ಮತ್ತೆ ಮುನ್ನಲೆಗೆ
ಟಾಲಿವುಡ್ ಡ್ರಗ್ಸ್ ಕೇಸ್ ಮತ್ತೆ ಮುನ್ನಲೆಗೆ ಬಂದಿದೆ. ಡ್ರಗ್ಸ್ ಕೇಸ್ ವಿವರಗಳನ್ನು ನೀಡುವಂತೆ ಇಡಿ, ಎಕ್ಸೈಸ್ ಇಲಾಖೆಗೆ ಪತ್ರ ಬರೆದಿದೆ ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಸಿನಿತಾರೆಯೆರನ್ನ ವಿಚಾರಣೆ ನಡೆಸಿರುವ ಇಡಿ, ಬ್ಯಾಂಕ್ ಲೇವಾದೇವಿಗಳನ್ನು ಪರಿಶೀಲನೆ ನಡೆದಿದೆ.
ಪ್ರಿನ್ಸ್ – ದಳಪತಿ ಫ್ಯಾನ್ ವಾರ್
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು, ಕಾಲಿವುಡ್ ಸ್ಟಾರ್ ಹೀರೋ ದಳಪತಿ ವಿಜಯ್ ಅಭಿಮಾನಿಗಳ ನಡುವೆ ಟ್ವಿಟರ್ ವಾರ್ ಶುರುವಾಗಿದೆ. ಈ ಸ್ಟಾರ್ ಹೀರೋಗಳಿಗೆ ದಕ್ಷಿಣದಲ್ಲಿ ಒಳ್ಳೆಯ ಕ್ರೇಜ್ ಇದೆ. ಆದರೆ ಈ ಇಬ್ಬರ ಅಭಿಮಾನಿಗಳ ಮಧ್ಯೆ ಇದೀಗ ಟ್ವಿಟ್ಟರ್ ವಾರ್ ಶುರುವಾಗಿದೆ.
ಕೊಹ್ಲಿ ಡಕ್ ಔಟ್
ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಸಂಪೂರ್ಣವಾಗಿ ಎಡವಿದ್ದಾರೆ. ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಶೂನ್ಯ ಸುತ್ತಿದ್ದಾರೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ 15 ಬಾರಿ ಶೂನ್ಯಕ್ಕೆ ಔಟ್ ಆದಂತೆ ಆಗಿದೆ.