ಮಂಗಳೂರು: ಮಕ್ಕಳಿಗೆ ಆನ್‍ಲೈನ್ ತರಗತಿ ನಡೆಸುವ ವಿಚಾರದಲ್ಲಿ ಹೈಕೋರ್ಟ್ ಕೂಡ ಯಾವುದೇ ಮಕ್ಕಳಿಗೆ ಆನ್‍ಲೈನ್ ತರಗತಿ ವಿಚಾರದಲ್ಲಿ ಬಲವಂತ ಮಾಡುವ ಹಾಗಿಲ್ಲ ಎಂದು ಹೇಳಿದೆ. ಹೀಗಾಗಿ ಈ ಹಿಂದಿನ ಏಳು ಜನ ಶಿಕ್ಷಣ ಸಚಿವರ ಜೊತೆ ಮುಂದಿನ ಶುಕ್ರವಾರ ಸಭೆ ನಡೆಸಿ ಚರ್ಚಿಸುತ್ತೇನೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೊಳಲಿ ಶ್ರೀರಾಜರಾಜೇಶ್ವರಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ನಮ್ಮಲ್ಲಿ ಅನೇಕ ಕಡೆ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಇದೆ.
ಇದರ ಜೊತೆಗೆ ವಾಸ್ತವ ಪರಿಸ್ಥಿತಿ ಹಿನ್ನೆಲೆಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಮುಂದಿನ ಶುಕ್ರವಾರ ಈ ಬಗ್ಗೆ ಸಭೆ ನಡೆಸಿ ಚರ್ಚಿಸುತ್ತೇನೆ. ಮಕ್ಕಳಿಗೆ ಹಿತವಾಗುವ ಪೋಷಕರ ಶೋಷಣೆಯಾಗದ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದರು.
ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಖಡ್ಡಾಯ ಮತ್ತು ಹೆಚ್ಚುವರಿ ಶುಲ್ಕ ವಸೂಲಿ ಮಾಡಬಾರದು ಎಂದು ಹೈಕೋರ್ಟ್ ಕೂಡ ಹೇಳಿದೆ. ಜುಲೈ ಅಂತ್ಯದವರೆಗೆ ಶಾಲಾ ಆರಂಭ ಮಾಡಬಾರದು ಅಂತ ಕೇಂದ್ರ ಸರ್ಕಾರ ಹೇಳಿದೆ.
ಹೀಗಾಗಿ ತಜ್ಞರು ಮತ್ತು ಪೋಷಕರ ಜೊತೆ ಚರ್ಚಿಸುತ್ತೇವೆ. ಜುಲೈ ನಂತರ ವಾತಾವರಣ ತಿಳಿಯಾದ ಮೇಲೆ ಪೋಷಕರ ಅಭಿಪ್ರಾಯ ಪಡೆಯುತ್ತೇವೆ. ಅಭಿಪ್ರಾಯ ಪಡೆದ ಬಳಿಕವೇ ಶಾಲೆಗಳ ಆರಂಭದ ಬಗ್ಗೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಅಪಾರ್ ID: ವಿದ್ಯಾರ್ಥಿಗಳು ಕಡ್ಡಾಯವಾಗಿ ಪಡೆಯಲೇ ಬೇಕು ಯಾಕೆ..?
ಅಪಾರ್ ID: ಭಾರತ ಸರ್ಕಾರದ 'ಒಂದು ರಾಷ್ಟ್ರ, ಒಂದು ವಿದ್ಯಾರ್ಥಿ ID' ಯೋಜನೆಯಡಿ ವಿದ್ಯಾರ್ಥಿಗಳಿಗೆ ನೀಡುವ ವಿಶಿಷ್ಟ ಗುರುತಿನ ಚಿಹ್ನೆ ಅಪಾರ್ ID ಒಂದು 12-ಅಂಕಿಯ ವಿಶಿಷ್ಟ...