NIA
ನವದೆಹಲಿ: ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಜಮ್ಮು ಕಾಶ್ಮೀರ, ದೆಹಲಿ ಸೇರಿ ದೇಶದ ನಾನಾ ಭಾಗಗಳಲ್ಲಿ ದಾಳಿ ನಡೆಸುತ್ತಿದ್ದಾರೆ. ಇದೀಗ ದಾಳಿಯನ್ನ ಗುರುವಾರವೂ ಮುಂದುವರೆಸಿದ್ದಾರೆ.
ದೆಹಲಿ ಹಾಗೂ ಶ್ರೀನಗರದಲ್ಲಿರುವ ಕೆಲ ಎನ್ ಜಿಒ, ಟ್ರಸ್ಟ್ ಗಳು ಹಾಗೂ ಸಾಮಾಜಿಕ ಹೋರಾಟಗಾರರ ಕಚೇರಿಗಳ ಮೇಲೆ ಇಂದು ಎನ್ ಐಎ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದೆ. ದೆಹಲಿ ಹಾಗೂ ಶ್ರೀನಗರದಲ್ಲಿರುವ 6 ಎನ್ ಜಿಒ ಮತ್ತು ಟ್ರಸ್ಟ್ ಗಳ ಮೇಲೆ ಎನ್ಐಎ ದಾಳಿ ನಡೆಸಿದೆ.
ಇನ್ನೂ ನಿನ್ನೆ ಸಹ ಬೆಂಗಳೂರು ಒಂದು ಮತ್ತು ಶ್ರೀನಗರ, ಬಂಡಿಪೋರಾದಲ್ಲಿ 10 ಪ್ರದೇಶಗಳ ಮೇಲೆ ಎನ್ಐಎ ದಾಳಿ ನಡೆಸಿತ್ತು. ಈ ವೇಳೆ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಇದೀಗ ದಾಳಿಯನ್ನು ಮುಂದುವರೆಸಿದ್ದು, ಮತ್ತಷ್ಟು ಕಡೆಗಳಲ್ಲಿ ರೇಡ್ ಮಾಡಿ ಮಹತ್ವದ ದಾಖಲೆಗಳ ವಶಕ್ಕೆ ಪಡೆಯುವ ಸಾಧ್ಯತೆಯಿದೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel