ದೇಶದಾದ್ಯಂತ NIA ದಾಳಿ | ಪ್ರಮೋದ್ ಮುತಾಲಿಕ್ ಹೇಳಿದ್ದೇನು ?
ಧಾರವಾಡ : ದೇಶದಾದ್ಯಂತ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಚೇರಿ ಮತ್ತು ನಾಯಕರ ನಿವಾಸದ ಮೇಲೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿದೆ.
ಎನ್ ಐ ಎ ಇತಿಹಾಸದಲ್ಲಿಯೇ ಇದು ಅತಿ ದೊಡ್ಡ ದಾಳಿ ಇದಾಗಿದ್ದು, ಕರ್ನಾಟಕ, ಉತ್ತರ ಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಕೇರಳ, ತಮಿಳುನಾಡು ಸೇರಿದಂತೆ 10 ರಾಜ್ಯಗಳಲ್ಲಿ ದಾಳಿ ನಡೆಸಲಾಗಿದೆ.
ಈ ಸಂಬಂಧ ಧಾರವಾಡದಲ್ಲಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು, ಕಳೆದ ಹಲವಾರು ವರ್ಷಗಳಿಂದ ಪಿ ಎಪ್ ಐ ಬ್ಯಾನ್ ಮಾಡಬೇಕು ಅಂತ ಹೋರಾಟ ಮಾಡುತ್ತಾ ಬಂದಿದ್ದೇವೆ.
ಗಲಭೆ, ಕೊಲೆಗಳಲ್ಲಿ ಪಿಎಪ್ ಆಯ್, ಎಸ್ ಡಿ ಪಿ ಐ ಭಾಗಿಯಾಗಿದರ ಬಗ್ಗೆ ಸಾಕ್ಷಿ ಇವೆ. ಕೇಂದ್ರ ರಾಜ್ಯ ಸರ್ಕಾರಕ್ಕೆ ಮಾಹಿತಿ ಇದೆ. ಬ್ಯಾನ್ ಮಾಡಲು ಮೀನಾಮೇಷ ಮಾಡುತ್ತಿದೆ.
ನಿನ್ನೆ ಪಿ ಎಫ್ ಐ ನ ಪ್ರಮುಖರ ಕಚೇರಿ ಮೇಲೆ ಎನ್ ಐ ಎ ದಾಳಿ ಮಾಡಿದೆ, ಅಲ್ಲಿ ಯಾವ ದಾಖಲಾತಿಗಳು ಸಿಗುತ್ತದೆ.
ಲಕ್ಷಗಟ್ಟಲೇ ಹಣ ಸೀಜ್ ಆಗಿದೆ ಅನ್ನೋದು ಗೊತ್ತಿದೆ. ನೂರಕ್ಕೆ ನೂರರಷ್ಟು ಅವರು ದೇಶದ್ರೋಹಿ ಕೆಲಸ ಮಾಡುತ್ತಿದ್ದಾರೆ.
ಹಿಜಾಬ್, ರುದ್ರೆಶ್ , ನೆಟ್ಟಾರ ಕೊಲೆ, ಹಿಂದೂ ನಾಯಕರ ಕೊಲೆಯಲ್ಲಿ ಬಾಗಿಯಾಗಿದ್ದರಿಂದ ಸಂಘಟನೆ ಹೆಸರು ಕೂಡಾ ಎಫ್ ಆರ್ ಐ ನಲ್ಲಿ ಉಲ್ಲೇಖ ಮಾಡಿದ್ದಾರೆ. ದಾಖಲೆಗಳು ಇದ್ರೂ ಬ್ಯಾನ್ ಮಾಡುತ್ತಿಲ್ಲ.
ಅವರ ಚಟುವಟಿಕೆಗಳನ್ನು ಸರ್ಕಾರ ತನಿಖೆ ಮಾಡಬೇಕು. ಅವರನ್ನ ಪರ್ಮನೆಂಟ್ ಆಗಿ ಜೈಲಿಗೆ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.