ಉಗ್ರ ಸಂಘಟೆನೆಯೊಂದಿಗೆ ಸಂಪರ್ಕ ಶಂಕೆ | ತಲ್ಹಾ ಖಾನ್ ಎಂಬುವರ ಮನೆ ಮೇಲೆ ದಾಳಿ – Saaksha Tv
ಮಹರಾಷ್ಟ್ರ : ಉಗ್ರ ಸಂಘಟೆನೆಯೊಂದಿಗೆ ಸಂಪರ್ಕದ ಶಂಕೆ ಹಿನ್ನಲೆಯಲ್ಲಿ ಐನ್ ಎ ಪುಣೆಯ ಕೊಂದ್ವಾ ಪ್ರದೇಶದ ನಿವಾಸಿ 38 ವರ್ಷದ ತಲ್ಹಾ ಖಾನ್ ಅವರ ಮನೆ ಮೇಲೆ ದಾಳಿ ನಡೆಸಿದೆ.
ತಲ್ಹಾ ಖಾನ್ ಖುರಾಸನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು, ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಸಿದ್ಧಾಂತಗಳನ್ನು ಪ್ರಚಾರದ ಕೆಲಸ ಮಾಡುತ್ತಿದ್ದ ಎಂದು ಎನ್ಐಎ ಶಂಕಿಸಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಕೆಲ ಡಿಜಿಟಲ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾದಿಯಾ ಅನ್ವರ್ ಶೇಖ್ ಮತ್ತು ನಬಿಲ್ ಸಿದ್ದಿಕಿ ಖತ್ರಿ ಎಂಬುವವರನ್ನು 2020ರ ಜುಲೈನಲ್ಲಿ ಬಂಧಿಸಿತ್ತು. ನಬಿಲ್ ಸಿದ್ದಿಕಿ ಖತ್ರಿ ಅವರೊಂದಿಗೆ ತಲ್ಹಾ ಖಾನ್ ಸಂಪರ್ಕದಲ್ಲಿದ್ದ ಎಂಬುದನ್ನು ಎನ್ಐಎ ಪತ್ತೆ ಮಾಡಿದ ನಂತರ ಈ ದಾಳಿ ನಡೆಸಿದೆ. ಘಟನೆ ಸಂಬಂಧ ತನಿಖೆ ಮುಂದುವರೆದಿದೆ.