ನೈಜೀರಿಯಾದಲ್ಲಿ ಗುಂಡಿನ ದಾಳಿ – 37 ಜನ ಸಾವು
ನೈಜೀರಿಯಾದಲ್ಲಿ ಗುಂಡಿನ ದಾಳಿ ನಡೆದಿದ್ದು, ದುರ್ಘಟನೆಯಲ್ಲಿ 37 ಮಂದಿ ಮೃತಪಟ್ಟಿದ್ದಾರೆ. ನೈಜೀರಿಯಾದ ಉತ್ತರ ಭಾಗದ ಸಮೀಪವಿರುವ ಗ್ರಾಮವೊಂದರಲ್ಲಿ ಈ ಗುಂಡಿನ ದಾಳಿ ನಡೆದಿದೆ.
ಈ ಹಿಂದಿನಿಂದಲೂ ಈ ಭಾಗದಲ್ಲಿ ಆಗಾಗ ಗಲಭೆಗಳು ನಡೆಯುತ್ತಲೇ ಇರುತ್ತವೆ. ರಾಜ್ಯದ ಉತ್ತರ ಭಾಗದಲ್ಲಿ ವಾಸಿಸುವ ಹೌಸಾ–ಫುಲಾನಿ ನಿವಾಸಿಗಳು ಮತ್ತು ದಕ್ಷಿಣದಲ್ಲಿ ಕೇಂದ್ರೀಕೃತವಾಗಿರುವ ಕ್ರಿಶ್ಚಿಯನ್ನರ ನಡುವೆ ದೀರ್ಘಕಾಲದ ಧಾರ್ಮಿಕ ಬಿಕ್ಕಟ್ಟು ಇದ್ದು, ಇದೇ ಆಗಾಗ ದಾಳಿಗಳಿಗೆ ಕಾರಣವಾಗುತ್ತಿರುತ್ತದೆ.
ಅಪಾರ ಸಂಖ್ಯೆಯ ದಾಳಿಕೋರರು ಬಂದೂಕುಗಳು ಮತ್ತು ಮಾರಕಾಸ್ತ್ರಗಳೊಂದಿಗೆ ಮಡಮೈ ಗ್ರಾಮಕ್ಕೆನುಗ್ಗಿ ಜನರ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಅನೇಕರು ಗಾಯಗೊಂಡಿದ್ದು, ಅವರನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 35 ಜನ ಸ್ಥಳದಲ್ಲೇ ಮೃತಪಟ್ಟಿದ್ರೆ , ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.