ADVERTISEMENT
Sunday, October 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಇಂದಲ್ಲ, ನಾಳೆಯಿಂದ ನೈಟ್​ ಕರ್ಫ್ಯೂ ಜಾರಿ: ರಾತ್ರಿ 11ರಿಂದ ಬೆಳಿಗ್ಗೆ 5ಗಂಟೆವರೆಗೆ

Kariyappa N by Kariyappa N
December 23, 2020
in Newsbeat, Politics, Samagra karnataka, ರಾಜ್ಯ
curfew
Share on FacebookShare on TwitterShare on WhatsappShare on Telegram

                              ರಾತ್ರಿ ಬರಲು ಕೊರೊನಾ ಅದೇನ್ ಗೂಬೆನಾ..!
ಬೆಂಗಳೂರು: ಇಂಗ್ಲೆಂಡ್‍ನಲ್ಲಿ ರೂಪಾಂತರಗೊಂಡಿರುವ ಹೊಸ ಕೊರೋನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇಂದಿನಿಂದ ಬದಲು ನಾಳೆಯಿಂದ ನೈಟ್​ ಕರ್ಫ್ಯೂ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನೈಟ್‍ಕಪ್ರ್ಯೂ ಅವಧಿಯಲ್ಲಿ ಎರಡು ಗಂಟೆಗಳ ಕಾಲ ವಿನಾಯಿತಿ ನೀಡಲಾಗಿದೆ. ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ನೈಟ್​ ಕರ್ಫ್ಯೂ ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದರು. ಆದರೆ, ನಾಳೆ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ನೈಟ್​ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಅಂದರೆ ನಾಳೆ ರಾತ್ರಿ 11 ಗಂಟೆಯಿಂದ ಜನವರಿ 2ರ ಬೆಳಗಿನ ಜಾವ 5 ಗಂಟೆವರೆಗೆ ನೈಟ್​ ಕರ್ಫ್ಯೂ ಜಾರಿಯಲ್ಲಿ ಇರಲಿದೆ.


ವಷಾರ್ಂತ್ಯದಲ್ಲಿ  ಈ ರೀತಿ ನೈಟ್​ ಕರ್ಫ್ಯೂ  ಜಾರಿ ಮಾಡುವುದರಿಂದ ಬಾರ್ ಅಂಡ್ ರೆಸ್ಟೋರೆಂಟ್, ಓಲಾ, ಉಬರ್ ಸೇರಿದಂತೆ ಅನೇಕ ಉದ್ಯಮಗಳಿಗೆ ನಷ್ಟವಾಗಲಿದೆ ಎಂಬ ಕಾರಣಕ್ಕೆ ರಾತ್ರಿ 10 ಗಂಟೆ ಬದಲು 11 ಗಂಟೆಗೆ ವಿಸ್ತರಿಸಲಾಗಿದೆ.
ಈ ಸಂಬಂಧ ಟ್ವಿಟರ್‍ನಲ್ಲಿ ಸ್ಪಷ್ಟಪಡಿಸಿರುವ ಸಿಎಂ ಯಡಿಯೂರಪ್ಪ, ಇಂದಿನಿಂದ ಜಾರಿ ಮಾಡಲು ಉದ್ದೇಶಿಸಿದ್ದ ರಾತ್ರಿ ಕರ್ಫ್ಯೂವನ್ನು ನಾಳೆಯಿಂದ ಅಂದರೆ ದಿನಾಂಕ 24ರಿಂದ ಜನವರಿ 1ರವರೆಗೆ ಜಾರಿ ಮಾಡಲಾಗಿದೆ. ರಾತ್ರಿ 10ರ ಬದಲಿಗೆ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Related posts

ಹೊಸಕೆರೆಹಳ್ಳಿ ಶೋಭಾ ಅಪಾರ್ಟ್ಮೆಂಟ್ ಗೂ ಡಿಕೆಶಿ ಕುಟುಂಬಕ್ಕೂ ಲಿಂಕ್ ಏನು? ಸಿದ್ದಗಂಗಾ ಮಠಕ್ಕೆ ಸಿಗದ ಎನ್ ಒ ಸಿ ಡಿಕೆಶಿ ಪರಿವಾರಕ್ಕೆ ಸುಲಭವಾಗಿ ಸಿಕ್ಕಿದ್ದು ಹೇಗೆ? ಕುಮಾರಸ್ವಾಮಿ ಪ್ರಶ್ನೆ

ಹೊಸಕೆರೆಹಳ್ಳಿ ಶೋಭಾ ಅಪಾರ್ಟ್ಮೆಂಟ್ ಗೂ ಡಿಕೆಶಿ ಕುಟುಂಬಕ್ಕೂ ಲಿಂಕ್ ಏನು? ಸಿದ್ದಗಂಗಾ ಮಠಕ್ಕೆ ಸಿಗದ ಎನ್ ಒ ಸಿ ಡಿಕೆಶಿ ಪರಿವಾರಕ್ಕೆ ಸುಲಭವಾಗಿ ಸಿಕ್ಕಿದ್ದು ಹೇಗೆ? ಕುಮಾರಸ್ವಾಮಿ ಪ್ರಶ್ನೆ

October 4, 2026
KPSC RTO ಇನ್ಸ್‌ಪೆಕ್ಟರ್ ನೇಮಕಾತಿ ಅಕ್ರಮ ಆರೋಪ: 70 ಅಭ್ಯರ್ಥಿಗಳ ಹೆಚ್ಚುವರಿ ಆಯ್ಕೆ ಪಟ್ಟಿಗೆ ತಡೆ

KPSC RTO ಇನ್ಸ್‌ಪೆಕ್ಟರ್ ನೇಮಕಾತಿ ಅಕ್ರಮ ಆರೋಪ: 70 ಅಭ್ಯರ್ಥಿಗಳ ಹೆಚ್ಚುವರಿ ಆಯ್ಕೆ ಪಟ್ಟಿಗೆ ತಡೆ

October 4, 2026


ನೈಟ್​ ಕರ್ಫ್ಯೂ ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ಡಿ. 24ರಂದು ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿಯಾಗದಂತೆ ಕ್ರಮ ವಹಿಸಲಾಗಿದೆ. ಈ ಸಂದರ್ಭದಲ್ಲಿ ಕ್ರಿಸ್‍ಮಸ್ ಅಂಗವಾಗಿ ರಾತ್ರಿ ಸಾಮೂಹಿಕ ಪ್ರಾರ್ತನೆಗೆ ಯಾವುದೇ ಅಡಚಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ನೈಟ್​ ಕರ್ಫ್ಯೂ ಗೈಡ್‍ಲೈನ್ಸ್..
* ರಾತ್ರಿ 11ರಿಂದ ಬೆಳಗಿನ ಜಾವ 5ಗಂಟೆವರೆಗೆ ನೈಟ್​ ಕರ್ಫ್ಯೂ ಜಾರಿ
* ಕೈಗಾರಿಕೆ, ನೈಟ್ ಶಿಫ್ಟ್ ಆಧಾರಿತ ಕಂಪನಿಗಳಿಗೆ ಶೇ.50ರಷ್ಟು ನೌಕರರ ಬಳಕೆಗೆ ಅನುಮತಿ. ಕಂಪನಿ, ಕೈಗಾರಿಕೆಗಳ ಐಡಿ ಕಾರ್ಡ್ ತೋರಿಸಿ ಹೋಗಬೇಕು. ಕೈಗಾರಿಕೆಗಳು ದಿನದ 24 ಗಂಟೆ ಕೆಲಸ ಮಾಡಲು ಅಡ್ಡಿ ಇಲ್ಲ.
* ದೂರದ ಪ್ರಯಾಣದ ಬಸ್ ಹಾಗೂ ರೈಲುಗಳ ಸಂಚಾರಕ್ಕೆ ಅನುಮತಿ
* ಪಿಕಪ್, ಡ್ರಾಪ್‍ಗೆ ಓಲಾ, ಉಬರ್, ಆಟೋಗಳಿಗೆ ಅವಕಾಶ
* ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಏರ್‍ಪೋರ್ಟ್‍ಗಳಿಂದ ಪಿಕ್‍ಅಪ್, ಡ್ರಾಪ್‍ಗೆ ಅವಕಾಶ. ಅಧಿಕಾರಿಗಳು ಕೇಳಿದರೆ ಟಿಕೆಟ್ ತೋರಿಸಬೇಕು.
* ಕ್ರಿಸ್‍ಮಸ್, ಹೊಸ ವರ್ಷಾಚರಣೆಗೆ ಷರತ್ತುಬದ್ಧ ಅನುಮತಿ
* ಸರಕು ಸಾಗಣೆ ವಾಹನಗಳಿಗೆ ಯಾವುದೇ ನಿರ್ಬಂಧ ಇಲ್ಲ

ರಾತ್ರಿ ಎಚ್ಚರವಾಗಿರೋಕೆ ಕೊರೊನಾ ಗೂಬೆನಾ..!
ಹೊಸ ಅಲೆಯ ಕೊರೊನಾ ಸೋಂಕು ತಡೆಗೆ ರಾಜ್ಯ ಸರ್ಕಾರ ನೈಟ್​ ಕರ್ಫ್ಯೂ ಜಾರಿ ಮಾಡುತ್ತಿರುವುದನ್ನು ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ವ್ಯಂಗ್ಯವಾಡಿದ್ದಾರೆ.


ರಾಜ್ಯ ಬಿಜೆಪಿ ಸರ್ಕಾರ ತರ್ಕರಹಿತವಾದ ಕಪ್ರ್ಯೂ ಆದೇಶವನ್ನು ನೋಡಿದೆ. ರಾತ್ರಿ ಮಾತ್ರ ಎಚ್ಚರವಾಗಿರೋಕೆ ಅದೇನು ಕೊರೊನಾ ಇಲ್ಲ, ಗೂಬೆನಾ ಎಂಬ ಅನುಮಾನ ನನ್ನನ್ನು ಕಾಡತೊಡಗಿದೆ. ಈ ಮಾತು ಹಾಸ್ಯವಾಗಿ ಕಂಡರೂ ನನ್ನಲ್ಲಿ ದಿಗಿಲು ಹುಟ್ಟಿಸಿದೆ ಎಂದು ಟ್ವಿಟರ್‍ ನಲ್ಲಿ ಲೇವಡಿ ಮಾಡಿದ್ದಾರೆ.

 

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: All service bandB S YADIYURAPPABJPCongressdecember 24Dr. K SudhakarkarnatakaNight Curfew
ShareTweetSendShare
Join us on:

Related Posts

ಹೊಸಕೆರೆಹಳ್ಳಿ ಶೋಭಾ ಅಪಾರ್ಟ್ಮೆಂಟ್ ಗೂ ಡಿಕೆಶಿ ಕುಟುಂಬಕ್ಕೂ ಲಿಂಕ್ ಏನು? ಸಿದ್ದಗಂಗಾ ಮಠಕ್ಕೆ ಸಿಗದ ಎನ್ ಒ ಸಿ ಡಿಕೆಶಿ ಪರಿವಾರಕ್ಕೆ ಸುಲಭವಾಗಿ ಸಿಕ್ಕಿದ್ದು ಹೇಗೆ? ಕುಮಾರಸ್ವಾಮಿ ಪ್ರಶ್ನೆ

ಹೊಸಕೆರೆಹಳ್ಳಿ ಶೋಭಾ ಅಪಾರ್ಟ್ಮೆಂಟ್ ಗೂ ಡಿಕೆಶಿ ಕುಟುಂಬಕ್ಕೂ ಲಿಂಕ್ ಏನು? ಸಿದ್ದಗಂಗಾ ಮಠಕ್ಕೆ ಸಿಗದ ಎನ್ ಒ ಸಿ ಡಿಕೆಶಿ ಪರಿವಾರಕ್ಕೆ ಸುಲಭವಾಗಿ ಸಿಕ್ಕಿದ್ದು ಹೇಗೆ? ಕುಮಾರಸ್ವಾಮಿ ಪ್ರಶ್ನೆ

by Shwetha
October 4, 2026
0

ಬೆಂಗಳೂರು: ನೈಸ್ ಯೋಜನೆ ಮತ್ತು ಭೂ ಅಕ್ರಮದ ವಿಚಾರವಾಗಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಡುವಿನ ಸಮರ ಈಗ...

KPSC RTO ಇನ್ಸ್‌ಪೆಕ್ಟರ್ ನೇಮಕಾತಿ ಅಕ್ರಮ ಆರೋಪ: 70 ಅಭ್ಯರ್ಥಿಗಳ ಹೆಚ್ಚುವರಿ ಆಯ್ಕೆ ಪಟ್ಟಿಗೆ ತಡೆ

KPSC RTO ಇನ್ಸ್‌ಪೆಕ್ಟರ್ ನೇಮಕಾತಿ ಅಕ್ರಮ ಆರೋಪ: 70 ಅಭ್ಯರ್ಥಿಗಳ ಹೆಚ್ಚುವರಿ ಆಯ್ಕೆ ಪಟ್ಟಿಗೆ ತಡೆ

by Shwetha
October 4, 2026
0

ಕರ್ನಾಟಕ ಲೋಕಸೇವಾ ಆಯೋಗ (KPSC) ನೇಮಕಾತಿ ಅಕ್ರಮಗಳ ತನಿಖೆ ನಡೆಯುತ್ತಿರುವ ಬೆನ್ನಲ್ಲೇ, ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿಗೆ ತಡೆ ನೀಡಲಾಗಿದೆ....

ಯುಪಿ ಚುನಾವಣೆಗೂ ಮುನ್ನ ಬಿಜೆಪಿಯಲ್ಲಿ ಭಾರೀ ಟಿಕೆಟ್ ಬದಲಾವಣೆ ಸಾಧ್ಯತೆ: 100 ಶಾಸಕರಿಗೆ ಕೊಕ್?

ಯುಪಿ ಚುನಾವಣೆಗೂ ಮುನ್ನ ಬಿಜೆಪಿಯಲ್ಲಿ ಭಾರೀ ಟಿಕೆಟ್ ಬದಲಾವಣೆ ಸಾಧ್ಯತೆ: 100 ಶಾಸಕರಿಗೆ ಕೊಕ್?

by Shwetha
October 4, 2026
0

ಉತ್ತರ ಪ್ರದೇಶದಲ್ಲಿ 2027ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ತನ್ನ ಹಾಲಿ ಶಾಸಕರ ಕಾರ್ಯಕ್ಷಮತೆ ಮತ್ತು ಕ್ಷೇತ್ರಮಟ್ಟದ ಜನಬೆಂಬಲದ ಕುರಿತು ಆಂತರಿಕ ಮೌಲ್ಯಮಾಪನ ನಡೆಸುತ್ತಿದೆ. ಈ...

ತೆರಿಗೆದಾರರಿಗೆ ಬಿಗ್ ರಿಲೀಫ್ ಐಟಿಆರ್ ಮತ್ತು ಟ್ಯಾಕ್ಸ್ ಆಡಿಟ್ ಗಡುವು ವಿಸ್ತರಣೆ: ದಂಡದಿಂದ ಬಚಾವಾಗಲು ಅಕ್ಟೋಬರ್ 21 ಕ್ಕೆ ಮೊದಲೇ ಈ ಕೆಲಸ ಮುಗಿಸಿ

ತೆರಿಗೆದಾರರಿಗೆ ಬಿಗ್ ರಿಲೀಫ್ ಐಟಿಆರ್ ಮತ್ತು ಟ್ಯಾಕ್ಸ್ ಆಡಿಟ್ ಗಡುವು ವಿಸ್ತರಣೆ: ದಂಡದಿಂದ ಬಚಾವಾಗಲು ಅಕ್ಟೋಬರ್ 21 ಕ್ಕೆ ಮೊದಲೇ ಈ ಕೆಲಸ ಮುಗಿಸಿ

by Shwetha
October 4, 2026
0

ನವದೆಹಲಿ: ಆದಾಯ ತೆರಿಗೆ ಪಾವತಿದಾರರಿಗೆ ಮತ್ತು ಆಡಿಟ್ ವ್ಯಾಪ್ತಿಗೆ ಬರುವ ಉದ್ಯಮಿಗಳಿಗೆ ಕೇಂದ್ರ ನೇರ ತೆರಿಗೆಗಳ ಮಂಡಳಿ (CBDT) ದೊಡ್ಡ ಮಟ್ಟದ ನಿರಾಳತೆ ನೀಡಿದೆ. 2026-27ರ ಅಸೆಸ್‌ಮೆಂಟ್...

ಕರ್ನಾಟಕದಲ್ಲಿ ತೀವ್ರ ಬರ: ಪ್ರಧಾನಿ ಮೋದಿಗೆ ಖರ್ಗೆ ಪತ್ರ, ₹3,705 ಕೋಟಿ ಪರಿಹಾರಕ್ಕೆ ಮನವಿ

ಕರ್ನಾಟಕದಲ್ಲಿ ತೀವ್ರ ಬರ: ಪ್ರಧಾನಿ ಮೋದಿಗೆ ಖರ್ಗೆ ಪತ್ರ, ₹3,705 ಕೋಟಿ ಪರಿಹಾರಕ್ಕೆ ಮನವಿ

by Shwetha
October 4, 2026
0

ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿದ್ದು, ರಾಜ್ಯಕ್ಕೆ ತುರ್ತಾಗಿ ಕೇಂದ್ರದ ನೆರವು ಬಿಡುಗಡೆ ಮಾಡುವಂತೆ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram