ರಾಷ್ಟ್ರ ರಾಜಧಾನಿಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆಗೆ ಬ್ರೇಕ್..!
ನವದೆಹಲಿ: ಒಂದೆಡೆ ಕೊರೊನಾ ಹಾವಳಿ ಮತ್ತೊಂದೆಡೆ ಬ್ರಿಟನ್ ಕೊರೊನಾ ವೈರಸ್ ಹಾವಳಿ.. ಇದ್ರಿಂದಾಗಿ ಹೊಸ ವರ್ಷಾಚರಣೆ ಸಂಭ್ರಮಕ್ಕೂ ಬ್ರೇಕ್ ಬಿದ್ದಿದೆ. ಕೊರೊನಾ ಹಾವಳಿ ತಪ್ಪಿಸಲು ವಿವಿಧ ರಾಜ್ಯಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗ್ತಿದೆ. ಅದರಂತೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲೂ ಇಂದು ಹಾಗೂ ನಾಳೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.
ಗರ್ಭಪಾತ ಕಾನೂನುಬದ್ಧ : ಅರ್ಜೆಂಟೀನಾದಲ್ಲಿ ಚಾರಿತ್ರಾತ್ಮಕ ನಿರ್ಧಾರ
ದೆಹಲಿ ಸರ್ಕಾರ ಡಿಸೆಂಬರ್ 31ರ ರಾತ್ರಿ 11 ಗಂಟೆಯಿಂದ ಜನವರಿ 1ರ ಬೆಳಗ್ಗೆ 6 ಗಂಟೆವರೆಗೆ ನೈಟ್ ಕರ್ಫ್ಯೂವಿಧಿಸಿದೆ. ದೆಹಲಿ ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ಅವರು ಕರ್ಫ್ಯೂ ಆದೇಶ ಹೊರೆಡಿಸಿದ್ದಾರೆ. ಇದರ ಅನ್ವಯ ಜನವರಿ 1ರ ರಾತ್ರಿ 11 ಗಂಟೆಯಿಂದ ಜನವರಿ 2ರ ಬೆಳಿಗ್ಗೆ 6 ಗಂಟೆವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ. ನೈಟ್ ಕರ್ಫ್ಯೂ ಜಾರಿಯಲ್ಲಿರೋವಾಗ 5 ಜನರಿಗಿಂತಲೂ ಹೆಚ್ಚು ಜನರು ಒಟ್ಟಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸೇರುವಂತಿಲ್ಲ. ಓಡಾಡುವಂತಿಲ್ಲ. ಕರ್ಫ್ಯೂ ಸಂದರ್ಭ ಅಂತರರಾಜ್ಯ ಜನರ ಪ್ರಯಾಣ, ಸರಕು ಸರಬರಾಜಿಗೆ ಯಾವುದೇ ತಡೆ ಇಲ್ಲ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel