ಕರ್ಫ್ಯೂ ವೇಳೆ ವಾಹನಗಳು ರಸ್ತೆಗಿಳಿದ್ರೆ ಸೀಜ್ – ಕಮಲ್ ಪಂತ್ ಎಚ್ಚರಿಕೆ..!
ಬೆಂಗಳೂರು : ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಜೋರಾಗಿ ಬೀಸಿದ್ದು, ಮಹಾಮಾರಿ ತಡೆಗೆ ಸರ್ಕಾರ ನಾನಾ ಕ್ರಮಗಳನ್ನ ತೆಗೆದುಕೊಳ್ತಾಯಿದೆ. ಈ ನಡುವೆ ದೆಹಲಿ, ಮಹಾರಾಷ್ಟ್ರ, ಛತ್ತೀಸ್ ಗಢ ಹಾಗೂ ಇನ್ನೂ ಕೆಲ ರಾಜ್ಯಗಳ ಮಾದರಿಯಲ್ಲೇ ಕರ್ನಾಟಕ ಸರ್ಕಾರವೂ ಕೂಡ ನೈಟ್ ಕಫ್ರ್ಯೂ ಹೇರಿದೆ. ಇಂದಿನಿಂದಲೇ ನೈಟ್ ಕಫ್ರ್ಯೂ ಆದೇಶವಿದ್ದು,
ನಾಳೆಯಿಂದ ಅಂದರೆ ಏಪ್ರಿಲ್ 10ರಿಂದ ಏಪ್ರಿಲ್ 20ರವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಕಫ್ರ್ಯೂ ಜಾರಿಯಲ್ಲಿರುವವರೆಗೂ ಆರೋಗ್ಯ ಮತ್ತು ಅವಶ್ಯಕ ಸೇವೆಗಳಿಗೆ ಮಾತ್ರ ವಿನಾಯ್ತಿ ಇರುತ್ತೆ. ನೈಟ್ ಶಿಫ್ಟ್ ಕೆಲಸಕ್ಕೆ ಹೋಗೋರು ರಾತ್ರಿ 10 ಗಂಟೆ ಒಳಗೆ ತಮ್ಮ ಕಚೇರಿಯನ್ನ ಸೇರಬೇಕು. ಕೆಲಸ ಮುಗಿದವರು 10 ಗಂಟೆ ಒಳಗೆ ತಮ್ಮ ತಮ್ಮ ಮನೆಯನ್ನ ಸೇರಬೇಕು. 10 ಗಂಟೆ ಮೇಲೆ ಅನಾವಶ್ಯಕವಾಗಿ ಯಾರೂ ಓಡಾಡಬಾರ್ದು. 10 ಎಂದು ಪೊಲೀಸ್ ಕಮಿಷನರ್ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
10 ಗಂಟೆ ಮೇಲೆ ಊರಿಗೆ ಹೋಗೋರು ಅಥವಾ ಬೇರೆ ಊರಿಂದ ಬೆಂಗಳೂರಿಗೆ ಬರೋರು ಬಸ್, ರೈಲು, ವಿಮಾನದ ಟಿಕೆಟ್ ತೋರಿಸಬೇಕು. ಬಸ್, ಕ್ಯಾಬ್ಗಳ ಸಂಚಾರಕ್ಕೆ ಅವಕಾಶವಿರುತ್ತೆ. ಅನಾವಶ್ಯಕವಾಗಿ ಓಡಾಡಿದ್ರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಆಸ್ಪತ್ರೆಗೆ ಹೋಗೋರು ಸಂಬಂಧಪಟ್ಟ ದಾಖಲೆಯನ್ನ ತೋರಿಸಬೇಕು. ಅನಾವಶ್ಯಕವಾಗಿ ವಾಹನಗಳು ಸಂಚರಿಸಿದ್ರೆ ಅವುಗಳನ್ನ ಸೀಜ್ ಮಾಡಲಾಗುತ್ತೆ. 10 ಗಂಟೆ ಮೇಲೆ ಹೋಂ ಡೆಲಿವರಿ ವಾಹನಗಳಿಗೆ ಅವಕಾಶ ಇರುತ್ತೆ ಅಂತ ಕಮಲ್ ಪಂತ್ ಹೇಳಿದ್ದಾರೆ.