ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಹಾಗೂ ರೇವತಿ ಕಲ್ಯಾಣಕ್ಕೆ ಇನ್ನೆರಡು ದಿನಗಳಷ್ಟೇ ಬಾಕಿ ಇದೆ. ಕೊರೊನಾ ವೈರಸ್ ಕಾಟ ಇಲ್ಲದಿದ್ದರೇ ನಿಖಿಲ್ ಕಲ್ಯಾಣ ಭಾರಿ ಅದ್ಧೂರಿಯಾಗಿ ನಡೆಯುತ್ತಿತ್ತು. ಆದ್ರೆ ಇದೀಗ ಸರಳಾತಿ ಸರಳವಾಗಿ ನಿಖಿಲ್-ರೇವತಿ ವಿವಾಹ ಮಹೋತ್ಸವ ನಡೆಸೋಕೆ ಹೆಚ್ ಡಿಡಿ ಫ್ಯಾಮಿಲಿ ಮುಂದಾಗಿದೆ. ಅಂದಹಾಗೆ ನಿಖಿಲ್ ವಿವಾಹ ರಾಮನಗರದಲ್ಲೇ ನಡೆಯಲಿದೆ ಅಂತಾ ಮೂಲಗಳು ತಿಳಿಸಿವೆ.
ಹೆಚ್ ಡಿಕೆ ಫಾರ್ಮ್ ಹೌಸ್ ನಲ್ಲಿ ನಡೆಯಲಿದೆ ಮದುವೆ..!
ಹೌದು..! ನಿಖಿಲ್- ರೇವತಿ ಮದುವೆ ನಡೆಯೋ ಸ್ಥಳದ ಕುರಿತು ಒಂದಷ್ಟು ಗೊಂದಲವಿತ್ತು. ಅರಮನೆ ಮೈದಾನ, ವಧುವಿನ ಸ್ವಗೃಹ.. ಹತ್ತಾರು ಸ್ಥಳಗಳು ಕೇಳಿ ಬಂದಿದ್ದವು. ಇದೀಗ ರಾಮನಗರದಲ್ಲೇ ಮದುವೆ ಸಮಾರಂಭ ನಡೆಸೋಕೆ ತೀರ್ಮಾನಿಸಲಾಗಿದೆ ಅಂತಾ ತಿಳಿದು ಬಂದಿದೆ. ರಾಮನಗರ ಬಳಿಯಿರೋ ಕುಮಾರಸ್ವಾಮಿ ಅವರ ಫಾರ್ಮ್ ಹೌಸ್ ನಲ್ಲಿ ಸಮಾರಂಭ ನಡೆಯಲಿದೆ. ಈ ಮದುವೆಯಲ್ಲಿ ಕೇವಲ 30 ಮಂದಿಯಷ್ಟೇ ಭಾಗಿಯಾಗಲಿದ್ದು, ಎರಡು ಕುಟುಂಬದ ಆಪ್ತರು, ಗೆಳೆಯರಷ್ಟೇ ಇರಲಿದ್ದಾರೆ.








