NHAI ನ ಟೋಲ್ ಆದಾಯ ಮುಂದಿನ 3 ವರ್ಷಗಳಲ್ಲಿ 1.40 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.. ಹೌದು.. ಮುಂದಿನ 3 ವರ್ಷಗಳಲ್ಲಿ 40,000 ಕೋಟಿ ರೂಪಾಯಿಗಳಿಂದ 1.40 ಲಕ್ಷ ಕೋಟಿ ರೂಪಾಯಿಗೆ ಟೋಲ್ ನ ಆದಾಯ ಏರಿಕೆಯಾಗುವುದಾಗಿ ತಿಳಿಸಿದ್ದಾರೆ..
ಅಲ್ಲದೇ , ಭಾರತದ ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆದಾರರಿಗೆ ಅತಿ ಹೆಚ್ಚು ಅವಕಾಶಗಳಿವೆ.. ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿವರ್ಷ ಸಂಚಾರವು ಹೆಚ್ಚುತ್ತಿದೆ.. ಹೂಡಿಕೆದಾರರು ಇಲ್ಲಿ ಹೂಡಿಕೆ ಮಾಡುವುದರಿಂದ ಭಾರತದ ಾರ್ಥಿಕತೆಗೂ ಕೂಡ ನೆರವಾಗುತ್ತದೆ ಎಂದಿದ್ದಾರೆ.. ಈ ಮೂಲಕ ಮೂಲಸೌಕರ್ಯ ವಲಯದಲ್ಲಿ ಹೂಡಿಕೆಗಳನ್ನು ಆಹ್ವಾನಿಸಿದ್ದಾರೆ..
ರಸ್ತೆ ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಮೂರು ತಿಂಗಳೊಳಗೆ ಸಮನ್ವಯ ಸಮಿತಿಗಳು ನಿರ್ಧರಿಸಬೇಕು ಎಂದು ಕೂಡ ಸೂಚಿಸಿದ್ದಾರೆ.
ಇದೇ ವೇಳೆ ಎಲ್ಲಾ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥ ಮಾಡಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮೂರು ಸದಸ್ಯರ ಸಮನ್ವಯ ಸಮಿತಿಯನ್ನು ರಚಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಈ ಪೀಠದಲ್ಲಿ ನ್ಯಾಯಾಂಗ, ಹಣಕಾಸು, ಸಾರ್ವಜನಿಕ ಆಡಳಿತ ಹಾಗೂ ಖಾಸಗಿ ವಲಯಗಳನ್ನು ಒಳಗೊಂಡ ತಜ್ಞರ ತಂಡ ಇರುತ್ತದೆ ಎಂದೂ ಸಹ ಮಾಹಿತಿ ನೀಡಿದ್ದಾರೆ..








