ನಿತ್ಯಾನಂದನಿಂದ ಕೈಲಾಸಕ್ಕೆ ಭೇಟಿ ನೀಡಲು ಫ್ರೀ ವೀಸಾ, ಊಟ ಮತ್ತು ವಸತಿ ಅಫರ್ Nithyananda issuing visas
ಹೊಸದಿಲ್ಲಿ, ಡಿಸೆಂಬರ್18: ತನ್ನದೇ ಆದ ದ್ವೀಪ ರಾಷ್ಟ್ರವನ್ನು ರಚಿಸಿದ ಸುಮಾರು ಒಂದು ವರ್ಷದ ನಂತರ, ಭಾರತದಿಂದ ತಲೆಮರೆಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಈಗ ಕೈಲಾಸಕ್ಕೆ ಬರಲು ಇಚ್ಛಿಸುವ ಭಕ್ತರಿಗೆ ವೀಸಾ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಭಾರತದಿಂದ ಪರಾರಿಯಾಗಿರುವ ನಿತ್ಯಾನಂದ ಈಕ್ವೆಡಾರ್ನಲ್ಲಿ ಆಶ್ರಯ ಪಡೆದಿರುವುದಾಗಿ ನಂಬಲಾಗಿದ್ದು, ಅಲ್ಲಿ ತನ್ನದೇ ಆದ ರಾಷ್ಟ್ರವಾದ ಕೈಲಾಸವನ್ನು ಸೃಷ್ಟಿಸಿದ್ದಾನೆ ಮತ್ತು ತನ್ನದೇ ಆದ ಪಾಸ್ಪೋರ್ಟ್ ಅನ್ನು ಸಹ ನೀಡಿದ್ದಾನೆ. ಇದೀಗ ‘ಗರುಡ’ ಎಂದು ಕರೆಯಲ್ಪಡುವ ಚಾರ್ಟರ್ ಫ್ಲೈಟ್ ಸೇವೆಗಳನ್ನು ಆಸ್ಟ್ರೇಲಿಯಾದಿಂದ ಕೈಲಾಸಕ್ಕೆ ಪ್ರಾರಂಭಿಸಲಾಗಿದೆ ಎಂದು ತಿಳಿದುಬಂದಿದೆ.
Get Help To Live Enlightened Life! Apply For Your Free E-Passport Todayhttps://t.co/7d2DwzckAG
— KAILASA's SPH Nithyananda (@SriNithyananda) December 16, 2020
ಫೇಸ್ಬುಕ್ನಲ್ಲಿ ಉಪನ್ಯಾಸ, ಸತ್ಸಂಗದ ವಿಡಿಯೋಗಳನ್ನು ಆಗಾಗ ಪೋಸ್ಟ್ ಮಾಡುವ ನಿತ್ಯಾನಂದ ಇದೀಗ ವಿಡಿಯೋ ಮೂಲಕ ಭಕ್ತರಿಗೆ ತನ್ನ ದೇಶ ಕೈಲಾಸಕ್ಕೆ ಬರಲು ವೀಸಾ ಅರ್ಜಿ ಸಲ್ಲಿಸುವಂತೆ ಮನವಿ ಮಾಡಿದ್ದಾನೆ.
ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ ..ಅಡಿಕೆಯಿಂದ ಚಾಕಲೇಟ್ ಉತ್ಪಾದಿಸಲು ಕ್ಯಾಂಪ್ಕೋ ಚಿಂತನೆ !
ಉಚಿತ ವೀಸಾ, ಆಹಾರ ಮತ್ತು ವಸತಿ ನೀಡುವುದಾಗಿ ಘೋಷಿಸಿರುವ ನಿತ್ಯಾನಂದ ಇ-ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದ್ದಾನೆ.
ಸೀಮಿತ ವೀಸಾಗಳನ್ನು ಮಾತ್ರ ಸ್ವೀಕರಿಸಲಾಗುವುದು ಎಂದು ಸ್ಪಷ್ಟಪಡಿಸಿರುವ ನಿತ್ಯಾನಂದ, ಕೈಲಾಸಕ್ಕೆ ಬಂದು ತಲುಪುವ ಬಗೆಯನ್ನೂ ಕೂಡ ವಿಡಿಯೋದಲ್ಲಿ ವಿವರಿಸಿದ್ದಾನೆ.
ಆಸ್ಪ್ರೇಲಿಯಾಕ್ಕೆ ತಾವಾಗಿಯೇ ವೀಸಾ ತೆಗೆದುಕೊಂಡು ಬನ್ನಿ. ಅಲ್ಲಿಂದ ನಮ್ಮ ಪ್ರೈವೇಟ್ ಚಾರ್ಟೆಟ್ ಪ್ಲೇನ್ ಗರುಡ ನಿಮ್ಮನ್ನು ಕೈಲಾಸಕ್ಕೆ ಕರೆದೊಯ್ಯುತ್ತದೆ. ನಮ್ಮ ಕೈಲಾಸಕ್ಕೆ ಬರಲು ವೀಸಾಕ್ಕೆ ಯಾವುದೇ ಶುಲ್ಕವಿಲ್ಲ ಹಾಗೂ ಉಚಿತ ಆಹಾರ ಮತ್ತು ವಸತಿ ಒದಗಿಸಲಾಗುವುದು ಎಂದು ನಿತ್ಯಾನಂದ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಟೊಮೆಟೊ ಕೆಚಪ್ ನ ಅದ್ಭುತ ಪ್ರಯೋಜನಗಳುhttps://t.co/AhldkJyvE9
— Saaksha TV (@SaakshaTv) December 17, 2020
ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ ..ಅಡಿಕೆಯಿಂದ ಚಾಕಲೇಟ್ ಉತ್ಪಾದಿಸಲು ಕ್ಯಾಂಪ್ಕೋ ಚಿಂತನೆ !https://t.co/XGZmzEctYG
— Saaksha TV (@SaakshaTv) December 17, 2020