ಯೂಟ್ಯೂಬ್ ನಿಂದ ತಿಂಗಳಿಗೆ 4 ಲಕ್ಷ ಗಳಿಸ್ತಿದ್ದಾರೆ ಗಡ್ಕರಿ
ದೆಹಲಿ : ಕೇಂದ್ರ ಸಚಿವ ನಿತಿನ್ ಗಡ್ಕರಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಹರಿಯಾಣದ ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇ ಕೆಲಸವನ್ನು ಪರಿಶೀಲಿಸಲು ಹೋದ ಗಡ್ಕರಿ, ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಾಗ ಈ ಕೆಳಗಿನ ಹೇಳಿಕೆಗಳನ್ನ ನೀಡಿದ್ದಾರೆ.
“ನಾನು ಕರೋನಾ ಸಮಯದಲ್ಲಿ ನನ್ನ ಮನೆಗೆ ಸೀಮಿತವಾಗಿದ್ದೆ ಮತ್ತು ಎರಡೂ ಕೆಲಸಗಳನ್ನು ಮಾಡಿದ್ದೇನೆ.
ಒಂದು ಅಡುಗೆ ಮಾಡುವುದು ಮತ್ತು ಇನ್ನೊಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉಪನ್ಯಾಸ ನೀಡುವುದು.
ಅವುಗಳನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಹೆಚ್ಚು ವೀವ್ಸ್ ಆಗಿರುವುದರಿಂದ ಯೂಟ್ಯೂಬ್ ನನಗೆ ತಿಂಗಳಿಗೆ ನಾಲ್ಕು ಲಕ್ಷಗಳನ್ನು ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಇದಲ್ಲದೇ ಮದುವೆಯಾದ ಆರಂಭದಲ್ಲಿ ತಮ್ಮ ಧರ್ಮಪತ್ನಿಗೆ ತಿಳಿಯದೇ ರಸ್ತೆ ಮಧ್ಯೆ ಇದ್ದ ಆಕೆಯ ತಂದೆ ಮನೆಯನ್ನು ಕೆಡವಲು ಆದೇಶ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ.









