ನಿತೀಶ್ ಮತ್ತೆ ಸಿಎಂ ಆಗಿದ್ದಕ್ಕೆ 4ನೇ ಬೆರಳನ್ನು ಕಟ್ ಮಾಡಿಕೊಂಡ ಅಭಿಮಾನಿ
ಪಾಟ್ನಾ : ನಿತೀಶ್ ಕುಮಾರ್ ಅವರು ಮತ್ತೆ ಬಿಹಾರ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದಿದ್ದಕ್ಕೆ ಅವರನ ಅಪ್ಪಟ ಅಭಿಮಾನಿವೊಬ್ಬ ತನ್ನ ನಾಲ್ಕನೇ ಬೆರಳನ್ನು ಕಟ್ ಮಾಡಿಕೊಂಡಿದ್ದಾನೆ.
ಅನಿಲ್ ಎಂಬುವವರು ಈ ರೀತಿ ಬೆರಳನ್ನು ಕಟ್ ಮಾಡಿಕೊಂಡ ನಿತೀಶ್ ಕುಮಾರ್ ಅಭಿಮಾನಿಯಾಗಿದ್ದು, ಆ ಬೆರಳನ್ನು ದೇವರಿಗೆ ಅರ್ಪಿಸಿದ್ದಾರೆ ಎಂದು ವರದಿಯಾಗಿದೆ.
2005ರಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗಿನಿಂದಲೂ ಅನಿಲ್ ಈ ರೀತಿ ಬೆರಳನ್ನು ಕಟ್ ಮಾಡಿಕೊಳ್ಳುವ ಆಚರಣೆಯನ್ನು ಪ್ರಾರಂಭಿಸಿದ್ದಾನೆ.
ಅದರಂತೆ 2010 ಹಾಗೂ 2015ರಲ್ಲಿ ನಿತೀಶ್ ಸಿಎಂ ಆಗಿ ಆಯ್ಕೆಯಾದಾಗಲೂ ಒಂದೊಂದು ಬೆರಳನ್ನು ಕತ್ತರಿಸಿಕೊಂಡಿದ್ದನು.ಕಣಿವೆನಾಡಿನಲ್ಲಿ ಉಗ್ರರ ಅಟ್ಟಹಾಸ : ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮ
ಇದೀಗ ಇತ್ತೀಚೆಗಷ್ಟೇ ನಡೆದ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಗೆದ್ದ ಕಾರಣ ನಿತೀಶ್ ಕುಮಾರ್ ಮತ್ತೆ ಅಧಿಕಾರಕ್ಕೇರಿದ್ದು, ಅನಿಲ್ ತನ್ನ ಆಚರಣೆ ಮುಂದುವರಿಸಿ ನಾಲ್ಕನೇ ಬೆರಳನ್ನು ಕತ್ತರಿಸಿಕೊಂಡು ಸುದ್ದಿಯಾಗಿದ್ದಾನೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅನಿಲ್, ನಿತೀಶ್ ಕುಮಾರ್ ಅವರ ವಿಜಯವನ್ನು ಆಚರಿಸಲು ತನ್ನದೇ ಆದ ಮಾರ್ಗವಿದೆ. ಚುನಾವಣೆ ಸೋತ ಬಳಿಕ ಸಿಹಿ ಚೆಲ್ಲಿದ್ರಂತೆ RJD ಕಾರ್ಯಕರ್ತರು : ಫ್ಯಾಕ್ಟ್ ಚೆಕ್ ನಲ್ಲಿ ಬಯಲಾಯ್ತು ಅಸಲಿಯತ್ತು..!
ನಾನು ಅವರ ಬಹುದೊಡ್ಡ ಅಭಿಮಾನಿಯಾಗಿದ್ದು, ಸಿಎಂ ನನ್ನನ್ನು ಭೇಟಿಯಾಗಲು ಬರುವುದಿಲ್ಲ ಎಂದು ನನಗೆ ತಿಳಿದಿತ್ತು. ಆದರೂ ಅವರ ಮೇಲೆ ಇರುವ ಗೌರವ ಕಿಂಚಿತ್ತೂ ಕಡಿಮೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









