ಪ್ರಧಾನಿಯಾಗುವ ಆಸೆಯಿಂದ ನಿತೀಶ್ ಕುಮಾರ್ BJP ಬೆನ್ನಿಗೆ ಚೂರಿ ಇರಿದಿದ್ದಾರೆ – ಅಮಿತ್ ಶಾ
ನಿತೀಶ್ ಕುಮಾರ್ ದೇಶದ ಪ್ರಧಾನಿಯಾಗುವ ಆಸೆಯಿಂದ ಬಿಜೆಪಿ ಬೆನ್ನಿಗೆ ಚೂರಿಯಿಂದ ಹಿರಿದಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಬಿಹಾರದ ಪೂರ್ಣಿಯಲ್ಲಿ ಹೇಳಿದ್ದಾರೆ.
ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಬಿಜೆಪಿ ತೊರೆದು ಆರ್ ಜೆ ಡಿ ಸಖ್ಯ ಬೆಳೆಸಿದ ನಂತರ ಮೊದಲ ಭಾರಿಗೆ ಗೃಹ ಸಚಿವರು ಎರಡು ದಿನಗಳ ಕಾಲ ಬಿಹಾರ ಪ್ರವಾಸ ಬೆಳೆಸಿದ್ದಾರೆ.
ಲಾಲು ಯಾದವ್ ಅವರ ಪಕ್ಷದಿಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿಗೆ ದ್ರೋಹ ಬಗೆದಿದ್ದಾರೆ ಎಂದೂ ಅಮಿತ್ ಶಾ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಾತಿ ಆಧಾರಿತ ರಾಜಕೀಯದ ಪರವಾಗಿ ನಿಂತು ಸಮಾಜವಾದವನ್ನು ತ್ಯಜಿಸಿದ ನಿತೀಶ್ ಕುಮಾರ್ ಅವರಿಗೆ ಯಾವುದೇ ಸಿದ್ಧಾಂತವಿಲ್ಲ ಎಂದು ಕುಟುಕಿದ್ದಾರೆ.
“ನಿತೀಶ್ ಕುಮಾರ್, ನೀವು 2014 ರಲ್ಲಿ ಇದೇ ಕೆಲಸ ಮಾಡಿದ್ದೀರಿ. 2024 ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಜನರು ಈ ಮಹಾಘಟಬಂಧನ್ ಅನ್ನು ಸೋಲಿಸುತ್ತಾರೆ. 2025 ರ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತದೆ” ಎಂದು ಅಮಿತ್ ಶಾ ತಮ್ಮ ಪಕ್ಷದ ರ್ಯಾಲಿಯನ್ನ ಉದ್ದೇಶಿಸಿ ಹೇಳಿದ್ದಾರೆ.
“ನಾವು ಸ್ವಾರ್ಥ ಮತ್ತು ಅಧಿಕಾರದ ಬದಲಿಗೆ ಸೇವೆ ಮತ್ತು ಅಭಿವೃದ್ಧಿಯ ರಾಜಕೀಯವನ್ನು ನಂಬುತ್ತೇವೆ. ಪ್ರಧಾನಿಯಾಗಲು ಬಯಸಿದ ನಿತೀಶ್ ಕುಮಾರ್ ಬೆನ್ನಿಗೆ ಚೂರಿ ಹಾಕಿದರು ಮತ್ತು ಈಗ ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಮಡಿಲಲ್ಲಿ ಕುಳಿತಿದ್ದಾರೆ. ಬಿಹಾರ ಮುಖ್ಯಮಂತ್ರಿ ಒಂದೇ ಒಂದು ಸಿದ್ಧಾಂತವನ್ನು ಹೊಂದಿದ್ದಾರೆ – “ನನ್ನ ಕುರ್ಚಿ ಹಾಗೇ ಉಳಿಯಬೇಕು” ಎಂದು ಅಮಿತ್ ಶಾ ಹೇಳಿದ್ದಾರೆ.