10 ವರ್ಷದ ಬಾಲಕಿಯ ಸಾಧನೆಗೆ ನೀವೂ ಸಹ ನಿಬ್ಬೆರಗಾಗ್ತಿರಾ..! ವಿಡಿಯೋ ವೈರಲ್..!
ಹತ್ತು ವರ್ಷದ ಬಾಲಕಿಯೊಬ್ಬಳು ಇದೀಗ ಇತರರಿಗೆ ಸ್ಪೂರ್ತಿಯಾಗುವಂತಹ ಸಾಧನೆ ಮಾಡಿ ಅಚ್ಚರಿ ಮೂಡಿಸಿದ್ದಾರೆ. ತನ್ನ ಫಿಟ್ನೆಸ್ ಗೋಲ್ಗಳ ಹತ್ತು ವರ್ಷದ ಆಯೆರ್ನ್ ಎಜಿನಾ ಅಟ್ಕಿನ್ಸನ್ ತನ್ನ ವೇಟ್ ಲಿಫ್ಟಿಂಗ್ ಕೌಶಲ್ಯದಿಂದ ನೆಟ್ಟಿಗರ ಗಮನ ಸೆಳೆದಿದ್ದಾಳೆ. ಬ್ರಿಟನ್ ನ ಟೆಲ್ ಫೋರ್ಡ್ ಮೂಲದವಳಾದ ಈ ಪುಟ್ಟ ‘ತೂಕ’ದ ಸಾಧನೆ ಮಾಡಿದ್ದಾಳೆ. ಹೌದು ಈಕೆ ತನ್ನ ದೇಹ ತೂಕದ ದುಪ್ಪಟ್ಟು ಭಾರವನ್ನು ಹೊರಬಲ್ಲ ಸಾಮರ್ಥ್ಯ ಹೊಂದಿದ್ದಾಲೆ. ಏಳನೇ ವಯಸ್ಸಿನಲ್ಲೇ ವೇಟ್ಲಿಫ್ಟಿಂಗ್ ಆರಂಭಿಸಿದ ಈ ಬಾಲಕಿ ಪ್ರತಿನಿತ್ಯ ಮುಂಜಾನೆ ಬಹಳ ಶಿಸ್ತಿನಿಂದ ಟ್ರೇನಿಂಗ್ ಮಾಡಿಕೊಂಡು ಬರುತ್ತಿದ್ದಾಳೆ. ಈಕೆಗೆ ಒಲಿಂಪಿಕ್ಸ್, ಕಾಮನ್ವೆಲ್ತ್ ಗೇಮ್ಸ್ ಹಾಗೂ ಕ್ರಾಸ್ ಫಿಟ್ ಗೇಮ್ಸ್ನಲ್ಲಿ ಪಾಲ್ಗೊಳ್ಳುವ ಕನಸಿದೆಯಂತೆ. ಸದ್ಯ ಈಕೆಯ ವೇಟ್ ಲಿಫ್ಟಿಂಗ್ ವಿಡಿಯೋಗಳು ಸಾಮಾಜಿಕ ತಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ನೆಟ್ಟಿಗರೆಲ್ಲರೂ ಈಕೆಯ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸ್ತಾಯಿದ್ದಾರೆ.