ಪ್ರಕೃತಿಯನ್ನು ಎದುರು ಹಾಕಿಕೊಂಡ್ರೆ ಸರ್ವನಾಶವಾಗೊದು ಖಂಡಿತ.. ಅದಕ್ಕೆ ಚೀನಾ ಪ್ರತ್ಯಕ್ಷ ಸಾಕ್ಷಿಯಾಗಿದೆ. ಚೀನಾದಲ್ಲಿ ಕೊರೊನಾ ಮಾರಕವಾಗಿ ಎರಗಿದ್ರೆ. ಅದೇ ಕೊರೊನಾ ಚೀನಾ ವಾಯುಗುಣದಲ್ಲಿ ಸಾಕಷ್ಟು ಬದಲಾವಣೆ ಉಂಟಾಗಿದೆ. ನಾಸಾ ಹಾಗೂ ಯುರೋಪ್ನ ಬಾಹ್ಯಾಕಾಶ ಸಂಸ್ಥೆಯ ವಾಯುಮಾಲಿನ್ಯ ಪರಿ ವೀಕ್ಷಿಸುವ ಉಪಗ್ರಹ ತೆಗೆದಿರೋ ಚೀನಾ ವಾಯುಗುಣ ಸಂಬಂಧದ ಫೋಟೋಗಳು ವಿಜ್ಞಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ವಾಯುಮಾಲಿನ್ಯ ಪರಿ ವೀಕ್ಷಿಸೋ ಉಪಗ್ರಹ ತೆಗೆದಿರುವ ಫೋಟೋದಲ್ಲಿ ಸಾರಜನಕದ ಡೈ ಆಕ್ಸೈಡ್ ಚೀನಾದಲ್ಲಿ ಸಂಪೂರ್ಣ ಕುಸಿತ ಕಂಡಿದೆ. ಕೊರೊನಾ ವೈರಸ್ ದಾಳಿಯ ಮೊದಲು ಹಾಗೂ ನಂತರದ ಫೊಟೋಗಳನ್ನ ಬಾಹ್ಯಾಕಾಶ ಸಂಸ್ಥೆ ರಿಲೀಸ್ ಮಾಡಿದೆ. ಇದರಲ್ಲಿ ವಿಷಕಾರಕ ನೈಟ್ರೋಜನ್ ಡೈ ಆಕ್ಸೈಡ್ ಚೀನಾದ ವಾತಾವರಣದಿಂದ ಮಾಯವಾಗಿದೆ. ಕೊರೊನಾದಿಂದ ಚೀನಾದಲ್ಲಿ ಎಲ್ಲಾ ಕೆಲಸ ಕಾರ್ಯಗಳು ಸ್ಥಗಿತಗೊಂಡಿದೆ. ಜನರು ಆಚೆ ಬರದ ಕಾರಣ ಎಲ್ಲಾ ಆಫೀಸ್, ಕಾರ್ಖಾನೆಗಳು ಬಂದ್ ಆಗಿದೆ. ಹಾಗೇ ಯಾವುದೇ ವಾಹನಗಳು ರಸ್ತೆಗಿಳಿಯದ ಕಾರಣ ಚೀನಾ ಹವಾಗುಣದಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿದೆ.








