ನಿವಾರ್ ಎಫೆಕ್ಟ್ : ಮಧ್ಯೆ ರಾತ್ರಿಯಿಂದ ಬೆಂಗಳೂರಿನಲ್ಲಿ ಭಾರಿ ಮಳೆ ಸಾಧ್ಯತೆ
ಬೆಂಗಳೂರು : ನಿವಾರ್ ಚಂಡಮಾರುತ ಎಫೆಕ್ಟ್ ರಾಜ್ಯಕ್ಕೂ ತಟ್ಟಲಿದ್ದು, ಇಂದು ಮಧ್ಯರಾತ್ರಿಯಿಂದ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ನಾಳೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ನಿವಾರ್ ಚಂಡಮಾರುತ ಬಗ್ಗೆ ರಾಜ್ಯ ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿ.ಎಸ್.ಪಾಟೀಲ್ ಮಾತನಾಡಿದ್ದು, ಇಂದು ರಾಜ್ಯಾದ್ಯಂತ ಒಣಹವೆ ಮುಂದುವರೆದಿದೆ.
ನಿವಾರ್ ಚಂಡಮಾರುತ ನೈರುತ್ಯ ಬಂಗಾಳ ಉಪಸಾಗರದಲ್ಲಿದೆ. ಇದರಿಂದ ಪುದುಚೇರಿಯಿಂದ 750 ಕಿ.ಮೀ., ಚೆನ್ನೈನಿಂದ 300 ಕಿ.ಮೀ. ದೂರ ಇದ್ದು, ವಾಯುವ್ಯ ದಿಕ್ಕಿನೆಡೆಗೆ ಬೀಸಲಿದೆ. `ಯಡಿಯೂರಪ್ಪ ಹೋಗೋದು ಗ್ಯಾರಂಟಿ ಆಗಿರಬೇಕು’ : ಸಿದ್ದರಾಮಯ್ಯ
ಇಂದು ಮಧ್ಯರಾತ್ರಿ ಕಾರೈಕಲ್ ಪ್ರದೇಶದಲ್ಲಿ ನಿವಾರ್ ಚಂಡಮಾರುತ ಹಾದು ಹೋಗಲಿದ್ದು, ಗಾಳಿಯ ವೇಗ ಪ್ರತಿ ಗಂಟೆಗೆ 120ರಿಂದ 130 ಕಿ.ಮೀ. ತಲುಪುವ ಸಾಧ್ಯತೆ ಇದೆ.
ಈ ಹಿನ್ನೆಲೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ-ನಗರದ ಕೆಲವು ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ನವೆಂಬರ್ 25, 28 ಮತ್ತು 29ರಂದು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ನ. 26 ಮತ್ತು 27ರಂದು ಹೆಚ್ಚು ಮಳೆಯಾಗಲಿದೆ.ಸರ್ಕಾರಕ್ಕೆ 105 ಜನನೂ ಮುಖ್ಯ, 17 ಮಂದಿಯೂ ಮುಖ್ಯ : ಎಂಟಿಬಿ
ಉತ್ತರ ಒಳನಾಡಿನಲ್ಲಿ 25 ಮತ್ತು 29ರಂದು ಒಣಹವೆ ಇರಲಿದ್ದು , ನ. 26 ಮತ್ತು 28ರಂದು ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









