ಬೆಂಗಳೂರು : ನಾಳೆಯಿಂದ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಅವಕಾಶ ಮಾಡಿಕೊಡಲಿದ್ದಾರೆ ಎನ್ನುವ ಮದ್ಯಪ್ರಿಯರ ಆಶಾವಾದ ಇದೀಗ ಹುಸಿಯಾಗಿದೆ. ಏಪ್ರಿಲ್.20ರ ವರೆಗೆ ಲಾಕ್ ಡೌನ್ ಕಟ್ಟು ನಿಟ್ಟಾಗಿ ರಾಜ್ಯದಲ್ಲಿ ಪಾಲಿನೆ ಮಾಡಲಿದ್ದೇವೆ. ಹೀಗಾಗಿ ಏಪ್ರಿಲ್ 20ರ ವರೆಗೂ ಮದ್ಯದಂಗಡಿ ಓಪನ್ ಮಾಡಲಾಗುತ್ತಿಲ್ಲ ಎಂದು ಅಬಕಾರಿ ಸಚಿವ ಹೆಚ್ ನಾಗೇಶ್ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅಬಕಾರಿ ಸಚಿವ ಹೆಚ್ ನಾಗೇಶ್, ಮದ್ಯದಂಗಡಿಯನ್ನು ಓಪನ್ ಮಾಡಿದ್ರೇ ಜನಸಂದಣಿ ಉಂಟಾಗಲಿದೆ. ಅಲ್ಲದೇ ಏಪ್ರಿಲ್ 20ರ ವರೆಗೆ ರಾಜ್ಯದಲ್ಲಿ ಲಾಕ್ ಡೌನ್ ಕಟ್ಟು ನಿಟ್ಟಾಗಿ ಜಾರಿಗೊಳಿಸುತ್ತಿರುವುದರಿಂದ ಏಪ್ರಿಲ್ 20ರ ವರೆಗೆ ಮದ್ಯದಂಗಡಿಯನ್ನು ಓಪನ್ ಮಾಡುವುದಿಲ್ಲ. ಏಪ್ರಿಲ್ 20ರ ನಂತ್ರ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸ್ಪಷ್ಟ ಪಡಿಸಿದರು.