ಕೆಆರ್ ಎಸ್ ಡ್ಯಾಂನಲ್ಲಿ ಯಾವುದೇ ಬಿರುಕಿಲ್ಲ : ಮುರುಗೇಶ್ ನಿರಾಣಿ Murugesh Nirani
ವಿಜಯಪುರ : ಕೆಆರ್ ಎಸ್ ಡ್ಯಾಂನಲ್ಲಿ ಬಿರುಕು ಬಿಟ್ಟಿದೆ ಎಂಬ ಸಂಸದೆ ಸುಮಲತಾ ಅವರ ಹೇಳಿಕೆ ಮಂಡ್ಯದಲ್ಲಿ ಭಾರಿ ಸಂಚಲನವನ್ನು ಸೃಷ್ಠಿ ಮಾಡಿದೆ.
ಇದೇ ವಿಚಾರವಾಗಿ ಜೆಡಿಎಸ್ ಶಾಸಕರು ಸಂಸದೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.
ಈ ಮಧ್ಯೆ ಈ ವಿಚಾರವಾಗಿ ಕೊಲ್ಹಾರದಲ್ಲಿ ಗಣಿ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದ್ದು, ಕೆಆರ್ಎಸ್ ಡ್ಯಾಂನಲ್ಲಿ ಯಾವುದೇ ಬಿರುಕಿಲ್ಲ.
ಮಂಡ್ಯದ ಬೇಬಿ ಬೆಟ್ಟಕ್ಕೆ ನಾನು ಭೇಟಿ ನೀಡಿದ್ದೇನೆ. ವೈಜ್ಞಾನಿಕವಾಗಿ ಪರೀಕ್ಷೆ ಆಗುವವರೆಗೂ ಯಾವುದೇ ಗಣಿಗಾರಿಕೆ ನಡೆಸಬಾರದು ಎಂದು ಸೂಚಿಸಲಾಗಿದೆ ಎಂದರು.
ಇನ್ನು ಕಳೆದ 4 ತಿಂಗಳಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಯುತ್ತಿಲ್ಲ.
ಈ ಸಂಬಂಧ ಕೆಆರ್ ಎಸ್ ಮುಖ್ಯ ಇಂಜಿನಿಯರ್ ಜೊತೆ ಸಹ ಮಾತನಾಡಿದ್ದೇನೆ.
ಕೆಆರ್ ಎಸ್ ಸುತ್ತಮುತ್ತ 10 ಕಿಮೀ ಗಣಿಗಾರಿಕೆ ಬಂದ್ ಮಾಡಲಾಗಿದೆ. ಬಿರುಕು ಬಿಟ್ಟಿರುವುದು ಕೇವಲ ಊಹಾಪೋಹಗಳಷ್ಟೇ. ರೈತರು ಇದಕ್ಕೆಲ್ಲ ಕಿವಿಕೊಡಬೇಡಿ ಎಂದು ಮನವಿ ಮಾಡಿಕೊಂಡರು.