ಯಾರ ಜೊತೆಗೋ ಫೋಟೋ ಇದ್ದಾಕ್ಷಣ ಅಪರಾಧವಾಗೋದಿಲ್ಲ : ಸಿಎಂ
ಕೊಪ್ಪಳ : ಯಾರ ಜೊತೆಗೋ ಫೋಟೋ ಇದ್ದಾಕ್ಷಣ ಅಪರಾಧವಾಗೋದಿಲ್ಲ. ಏನು ಎತ್ತ ಎಂದು ಹಿನ್ನೆಲೆ ಗೊತ್ತಾಗಬೇಕು ಎಂದು ಯುವರಾಜ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವಂಚನೆ ಪ್ರಕರಣದ ಆರೋಪಿ ಯುವರಾಜ ಜೊತೆಗೆ ಬಿಜೆಪಿಯ ಹಲವು ಶಾಸಕರ ಹಾಗೂ ಸಚಿವ ವಿ ಸೋಮಣ್ಣ ಅವರ ಫೋಟೋ ವೈರಲ್ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ.
ಡಿಕೆಶಿ ಸುಮ್ಮನಿದ್ದರೇ ಒಳ್ಳೇದು ಇಲ್ಲದಿದ್ದರೆ.. : ಎಸ್.ಟಿ.ಸೋಮಶೇಖರ್ ಎಚ್ಚರಿಕೆ
ಯುವರಾಜ ವಂಚನೆ ಪ್ರಕರಣ ತನಿಖೆಯಾಗುತ್ತಿದೆ. ಸೂಕ್ತ ಸಮಯದಲ್ಲಿ ಸಂಬಂಧಿಸಿದವರು ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಬಳಿಕ ಫೋಟೋ ವಿಚಾರವಾಗಿ ಮಾತನಾಡಿ, ಯಾರ ಜೊತೆಗೋ ಫೋಟೋ ಇದ್ದಾಕ್ಷಣ ಅಪರಾಧವಾಗೋದಿಲ್ಲ.
ಏನು ಎತ್ತ ಎಂದು ಹಿನ್ನೆಲೆ ಗೊತ್ತಾಗಬೇಕು. ವಿವರವಾದ ಮಾಹಿತಿ ಸಿಕ್ಕ ಬಳಿಕ ನೋಡೋಣ. ಆ ಬಗ್ಗೆ ತನಿಖೆ ನಡೆಯುತ್ತಿದೆ. ಸಂಬಂಧಪಟ್ಟವರು ಸೂಕ್ತ ಸಂದರ್ಭದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಇನ್ನು ಹೈಕಮಾಂಡ್ ಯಾವಾಗ ಸಚಿವ ಸಂಪುಟ ವಿಸ್ತರಣೆ ಮಾಡಿ ಅಂತ ಹೇಳ್ತಾರೋ, ಆವಾಗ ಸಂಪುಟ ವಿಸ್ತರಣೆ ಮಾಡ್ತೀವಿ ಎಂದು ಸಿಎಂ ಬಿಎಸ್ ವೈ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









