`ರಾಜೀನಾಮೆ ನಿರ್ಧಾರ ಬೇಡ’ : ಆನಂದ್ ಸಿಂಗ್ ಗೆ ರೇಣುಕಾಚಾರ್ಯ ಮನವಿ
ನವದೆಹಲಿ : ತಾವು ಕೇಳಿದ ಖಾತೆ ದೊರಕದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್ ಬಹಿರಂಗವಾಗಿಯೇ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ರಾಜೀನಾಮೆಯ ಎಚ್ಚರಿಕೆಯನ್ನೂ ಕೂಡ ನೀಡಿದ್ದಾರೆ.
ಈ ಬಗ್ಗೆ ಇದೀಗ ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದು, ಸಚಿವ ಆನಂದ್ ಸಿಂಗ್ ನನ್ನ ಆತ್ಮೀಯ ಸ್ನೇಹಿತರಾಗಿದ್ದು, ರಾಜೀನಾಮೆ ನಿರ್ಧಾರ ಬೇಡವೆಂದು ಅವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಸಮ್ಮಿಶ್ರ ಸರ್ಕಾರ ಪತನವಾಗುವಲ್ಲಿ ಆನಂದ್ ಸಿಂಗ್ ಕೊಡುಗೆ ಮಹತ್ವದ್ದಾಗಿದೆ.
ಅವರಿಗೆ ಒಳ್ಳೆಯ ಖಾತೆ ಸಿಗದಿರುವುದಕ್ಕೆ ಮೊದಲೂ ನೋವು ಇತ್ತು. ಈಗಲೂ ಅದೇ ವಿಚಾರವಾಗಿ ಅವರಿಗೆ ನೋವಾಗಿದೆ. ಪಕ್ಷದ ನಾಯಕರು ಆನಂದ್ ಸಿಂಗ್ ಅವರನ್ನು ಸಮಾಧಾನ ಪಡಿಸುತ್ತಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ತಮಗೆ ಸಚಿವಸ್ಥಾನ ತಪ್ಪಿದ ವಿಚಾರವಾಗಿ ಮಾತನಾಡಿ, ನನ್ನ ಜೀವನದಲ್ಲಿ ನಿರಾಸೆಯ ಪ್ರಶ್ನೆಯೇ ಇಲ್ಲ. ನಾನು ಹೋರಾಟದ ಮೂಲಕವೇ ಬೆಳೆದು ಬಂದಿದ್ದೇನೆ. ಸಚಿವನಾಗಿಲ್ಲವೆಂದು ನನಗೆ ಬೇಸರವಿಲ್ಲ. ನಾನು ಆಶಾವಾದಿಯಾಗಿದ್ದೇನೆ ಎಂದರು.










