ನವದೆಹಲಿ : ಅವಧಿಗೂ ಮುನ್ನ ಲೋಕಸಭೆ ಚುನಾವಣೆ ನಡೆಯುವುದಿಲ್ಲ ಎಂದು ಬಿಜೆಪಿ ಹೇಳಿದೆ.
ಎಲ್ಪಿಜಿ (LPG) ಬೆಲೆಯಲ್ಲಿ 200 ರೂ. ಇಳಿಕೆ, ಉಜ್ವಲ ಯೋಜನೆಯ ಸಂಪರ್ಕವನ್ನು 75 ಲಕ್ಷ ವಿಸ್ತರಿಸುವ ಕೇಂದ್ರದ ನಿರ್ಧಾರದ ಬೆನ್ನಲ್ಲಿಯೇ ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಡಿಸೆಂಬರ್ ಅಥವಾ ಜನವರಿಯಲ್ಲಿ ಚುನಾವಣೆ ನಡೆಯಲಿದೆ ಎಂಬ ಮಾತುಗಳನ್ನು ಹೇಳಿದ್ದರು. ಆದರೆ, ಬಿಜೆಪಿ ಇದಕ್ಕೆ ಉತ್ತರ ನೀಡಿದೆ.
ಹಿರಿಯ ಬಿಜೆಪಿ (BJP) ನಾಯಕರೊಬ್ಬರು ಈ ವಿಷಯವನ್ನು ನಿರಾಕರಿಸಿದ್ದಾರೆ. ಅವಧಿ ಪೂರ್ವ ಚುನಾವಣೆಗೆ ಹೋಗುವ ಅಗತ್ಯ ಇಲ್ಲ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಖ್ಯಾತಿ ಹೆಚ್ಚುತ್ತಲೇ ಇದೆ. ವಿಶ್ವದ ಎಲ್ಲ ನಾಯಕರನ್ನು ಪ್ರಧಾನಿ ಮೋದಿ ಹಿಂದಿಕ್ಕಿದ್ದಾರೆ. ಮುಂಚಿತವಾಗಿ ಚುನಾವಣೆಗೆ ಹೋಗುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದ್ದಾರೆ.
80% ಭಾರತೀಯರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಪೂರಕ ಅಭಿಪ್ರಾಯ ಹೊಂದಿದ್ದಾರೆ. 10 ಭಾರತೀಯರಲ್ಲಿ ಏಳು ಮಂದಿ ನಂಬುತ್ತಾರೆ ಎಂದು ಹೇಳಿದೆ. ಮೋದಿಯವರ ಅಭಿವೃದ್ಧಿ ರಾಜಕೀಯ ಅರಿಯದೇ ವಿಪಕ್ಷ ನಾಯಕರು ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.