ಮಂಡ್ಯ: ಬೆಂಗಳೂರು ಹಾಗೂ ಮೈಸೂರಿನಲ್ಲಿರುವ ಯಾರೇ ಆದರೂ ತಮ್ಮ ಹುಟ್ಟೂರು ಅಂತಲೋ, ಸಂಬಂಧಿಕರು ಇದ್ದಾರೆ ಅಂತಲೋ ಈ ಗ್ರಾಮಕ್ಕೆ ನೀವೇನಾದ್ರೂ ಕಾಲಿಟ್ಟರೆ 5 ಸಾವಿರ ರೂ. ದಂಡ ಕಟ್ಟಲೇಬೇಕು.
ಇಂತಹದ್ದೊಂದು ರೂಲ್ಸ್ ಮಾಡಿದ್ದಾರೆ ಮಂಡ್ಯ ತಾಲೂಕಿನ ಬೇಲೂರು ಗ್ರಾಮಸ್ಥರು. ಈ ಗ್ರಾಮಕ್ಕೆ ಹೊರಗಿನಿಂದ ಯಾರೂ ಬರುವಂತಿಲ್ಲ. ಬಂದ್ರೆ 5,000 ರೂ. ದಂಡ ಕಟ್ಟಬೇಕು ಎಂದು ಡಂಗೂರ ಸಾರಲಾಗಿದೆ.

ಮಂಡ್ಯ ಜಿಲ್ಲೆಗೆ ಹೊರಗಿನವರದ್ದೇ ಭಯ. ಬೆಂಗಳೂರಿನಿಂದ ಬಂದವರಲ್ಲಿ ಕರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯದ ಬೇಲೂರು ಗ್ರಾಮಕ್ಕೆ ಬೆಂಗಳೂರು-ಮೈಸೂರು ಜಿಲ್ಲೆಯಿಂದ ಯಾರೊಬ್ಬರೂ ಬರುವಂತಿಲ್ಲ. ಬಂದರೆ ದಂಡ ಕಟ್ಟಬೇಕು ಎಂದು ಡಂಗೂರ ಸಾರಲಾಗಿದೆ. ಅಲ್ಲದೆ, ಈ ಊರಿನ ಜನರೂ ಅನಗತ್ಯವಾಗಿ ಹೊರಗೆ ಹೋಗುವಂತಿಲ್ಲ ಎಂದೂ ಸೂಚನೆ ನೀಡಲಾಗಿದೆ.








