ನಂದಿನಿ ಹಾಲಿನ ಪ್ಯಾಕೇಟ್ ಮೇಲೆ ಕಾಣದಂತೆ ಮಾಯವಾದವು ಕನ್ನಡ ಅಕ್ಷರಗಳು..!
ಬೆಳಗಾವಿ: ಕರುನಾಡಿನ ಕೆಎಂಎಫ್ ನ ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಕನ್ನಡ ಅಕ್ಷರಗಳೇ ಇಲ್ಲದಂತಾಗಿದೆ.
ನಂದಿನಿ ಹಾಲಿನ ಪ್ಯಾಕೇಟ್ ಮೇಲೆ ಹಿಂದಿ ಮತ್ತು ಇಂಗ್ಲೀಷ್ ಅಕ್ಷರಗಳು ಮಾತ್ರ ಇದ್ದು, ಕನ್ನಡ ಅಕ್ಷರುಗಳು ಮಾಯವಾಗಿವೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀರ್ವ ವಿರೋಧ ವ್ಯಕ್ತವಾಗುತ್ತಿದ್ದು, ನೆಟ್ಟಿಗರು ಕೆಎಂಎಫ್ ಗೆ ಛಿಮಾರಿ ಹಾಕುತ್ತಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಕೆಎಂಎಫ್ ನ ನಂದಿನಿ ಪ್ರೊಡೆಕ್ಟ್ ಕರ್ನಾಟಕದ್ದೋ? ಅಲ್ವೋ? ಎಂದು ಪ್ರಶ್ನಿಸುತ್ತಿದ್ದಾರೆ. ಈ ಮೂಲಕ ಕೆಎಂಎಫ್ ವಿರುದ್ಧ ಕನ್ನಡಾಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಅರಬಾಂವಿ ಶಾಸಕರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಅಧ್ಯಕ್ಷರಾಗಿದ್ದಾರೆ. ಮಾಯವಾಗಿರುವ ಕನ್ನಡಕ್ಷರಗಳು ನಂದಿನ ಹಾಲಿನ ಪ್ಯಾಕೆಟ್ ಮೇಲೆ ಹಾಕಬೇಕು ಎಂದು ಬಾಲಚಂದ್ರ ಜಾರಕಿಹೊಳಿ ಅವರ ಬಳಿ ಕನ್ನಡಿಗರು ಆಗ್ರಹಿಸಿದ್ದಾರೆ.
ಈ ಮೊದಲು ನಂದಿನ ಹಾಲಿನ ಪ್ಯಾಕೆಟ್ ಮೇಲೆ ಕನ್ನಡ ಅಕ್ಷರಗಳೇ ಇರುತ್ತಿದ್ದವು. ಆದರೆ ಕಳೆದ ಕೆಲ ದಿನಗಳಿಂದ ಸರಬರಾಜು ಆಗುತ್ತಿರುವ ನಂದಿನಿ ಹಾಲಿನ ಪ್ಯಾಕೆಟ್ನಲ್ಲಿ ಕನ್ನಡ ಅಕ್ಷರಗಳು ಮಾಯವಾಗಿವೆ.








