‘ಮಾಸ್ಕ್ ಬೇಡ’ ವೆಂದ ಮೋದಿ : ವಿಡಿಯೋ ಸಖತ್ ಟ್ರೋಲ್
ನವದೆಹಲಿ : ಮಾಸ್ಕ್ ಧರಿಸಿ ಕೊರೊನಾವನ್ನು ನಿರ್ಲಕ್ಷ್ಯ ಮಾಡಬೇಡಿ ಎಂದು ದೇಶವಾಸಿಗಳಿಗೆ ಪಾಠ ಮಾಡೋ ಪ್ರಧಾನಿ ನರೇಂದ್ರ ಮೋದಿ, ಮಾಸ್ಕ್ ಬೇಡವೆಂದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ವಿಡಿಯೋವನ್ನ ಆಮ್ ಆದ್ಮಿ ಪಕ್ಷ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮೋದಿಯಂತೆ ಮಾಡಬೇಡಿ.. ಮಾಸ್ಕ್ ಧರಿಸಿ ಎಂಬ ಸಂದೇಶ ರವಾನಿಸುತ್ತಿದೆ.
https://twitter.com/i/status/1339454470116106240
ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಕರಕುಶಲ ವಸ್ತುಗಳನ್ನ ಮಾರಾಟ ಮಾಡುವ ಸ್ಟಾಲ್ ಗೆ ಬಂದಿದ್ದಾರೆ. ಮೋದಿ ಮಾಸ್ಕ್ ಧರಿಸದೇ ಇರೋದನ್ನ ಗಮನಿಸಿದ ಸ್ಟಾಲ್ ನವರು ಮಾಸ್ಕ್ ನೀಡಿದ್ದಾರೆ. ಆದ್ರೆ ಮೋದಿ ಬೇಡ ಬೇಡ ಎಂದು ಹೇಳಿ ಮುಂದೆ ಸಾಗಿದ್ದಾರೆ. ಇದನ್ನ ಸ್ಟಾಲ್ ನವರು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಮಲ್ ನಾಥ್ ಸರ್ಕಾರ ಉರುಳಿಸಿದ್ದು ಮೋದಿ : ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅಚ್ಚರಿ ಹೇಳಿಕೆ
ಇದೇ ವಿಡಿಯೋವನ್ನು ಆಪ್ ಹಂಚಿಕೊಂಡು ಮೋದಿಯವರನ್ನು ಅಪಹಾಸ್ಯ ಮಾಡುತ್ತಾ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುತ್ತಿದೆ.
ಅಂದಹಾಗೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೋದಿ ಫಾಲೋವರ್ಸ್ ತಮ್ಮದೇಯಾದ ವಾದ ಮಂಡಿಸುತ್ತಿದ್ದಾರೆ. ಇತ್ತ ನೆಟ್ಟಿಗರು ಇದು ಮೋದಿ ಮಾರ್ಕೆಟಿಂಗ್. ಕ್ಯಾಮೆರಾಗಳು ತಮ್ಮನ್ನು ಫೋಕಸ್ ಮಾಡಬೇಕೆಂದು ಮೋದಿ ಮಾಸ್ಕ್ ಬೇಡವೆಂದಿದ್ದಾರೆ. ಇದೇ ಮೊದಲೇನಲ್ಲ ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








