ಸಿಎಂ ಬದಲಾವಣೆ ಮಾಡುವಂತೆ ಹೇಳುವ ಹಕ್ಕು ಯಾರಿಗೂ ಇಲ್ಲ : ರೇಣುಕಾಚಾರ್ಯ
ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆ ಮಾಡುವಂತೆ ಹೇಳುವ ಹಕ್ಕು ಯಾರಿಗೂ ಇಲ್ಲ. ಒಬ್ಬಿಬ್ಬರಿಂದ ಸಿಎಂ ಬದಲಾವಣೆ ಅಸಾಧ್ಯ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಟಾಂಗ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಭೇಟಿ ನೀಡುವ ವಿಚಾರವಾಗಿ ಮಾಹಿತಿ ನೀಡಿದರು.
ಲೋಕಸಭಾ ಅಧಿವೇಶನದ ಹಿನ್ನೆಲೆ ಜುಲೈ 20, 21ಕ್ಕೆ ದೆಹಲಿಗೆ ಹೋಗಲು ಹಲವು ಶಾಸಕರು ನಿರ್ಧಾರ ಮಾಡಿದ್ದೇವೆ. ಹೋಗುವಾಗ ಕದ್ದು ಮುಚ್ಚಿ ತೆರಳುವುದಿಲ್ಲ ಎಂದು ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ್ ಅವರನ್ನು ಕುಟುಕಿದರು.
ಮುಖ್ಯಮಂತ್ರಿ ಬದಲಾವಣೆ ಮಾಡುವಂತೆ ಹೇಳುವ ಹಕ್ಕು ಯಾರಿಗೂ ಇಲ್ಲ. ಒಬ್ಬಿಬ್ಬರಿಂದ ಸಿಎಂ ಬದಲಾವಣೆ ಅಸಾಧ್ಯ ಎಂದು ಯತ್ನಾಳ್ ವಿರುದ್ಧ ಟೀಕೆ ಮುಂದುವರೆಸಿದ ರೇಣುಕಾಚಾರ್ಯ, ರಾಷ್ಟ್ರೀಯ ನಾಯಕರ ಸೂಚನೆ ಮೇಲೆ, ಶಾಸಕರ ಬೆಂಬಲದೊಂದಿಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ.
ಅವರು ಆ ಸ್ಥಾನದಲ್ಲಿ ಮುಂದುವರೆಯುತ್ತಾರೋ ಇಲ್ಲವೋ ಅಂತ ಹೇಳೋಕೆ ನಾನ್ಯಾರು..? ಜನಾದೇಶ ಅವರ ಪರವಿದೆ. ಬೆಂಗಳೂರಲ್ಲಿ ಕುಳಿತು ರಾಜಕಾರಣ ಮಾಡಿದ್ರೆ ಆಗಲ್ಲ. ದೆಹಲಿಗೆ ಹೋಗಿ ರಾಜಕಾರಣ ಮಾಡೋಕೂ ಆಗಲ್ಲ ಎಂದರು.