ಬೆಳಗಾವಿ: ಕಾಂಗ್ರೆಸ್ ನ ಯಾವ ನಾಯಕರಿಗೂ ನೋಟಿಸ್ ನೀಡುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಹೇಳಿದ್ದಾರೆ.
ಬೆಳಗಾವಿಯ (Belagavi) ಸಾಂಬ್ರಾ ಏರ್‌ಪೋರ್ಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ ಪಕ್ಷದಿಂದ ನೋಟಿಸ್ ವದಂತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಯಾವ ಸಚಿವರಿಗೂ, ಶಾಸಕರಿಗೂ ನೋಟಿಸ್ ನೀಡುವುದಿಲ್ಲ. ಇದೆಲ್ಲ ಬಿಜೆಪಿ ಪ್ರಾಯೋಜಿತ. ಆಧಾರ ರಹಿತ ಮಾತುಗಳ ಮೇಲೆ ವಿಶ್ವಾಸವಿಡುವುದಿಲ್ಲ. ರಾಜ್ಯದ ಜನರೂ ಇಡಬಾರದು ಎಂದು ಹೇಳಿದ್ದಾರೆ.
ಈ ವದಂತಿಗಳನ್ನೆಲ್ಲ ಯಾರು ಹಬ್ಬಿಸುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಚರ್ಚೆ ವಿಚಾರವಾಗಿಲ್ಲ ಎಂದಿರುವ ಅವರು, ಕಾಂಗ್ರೆಸ್‌ನಲ್ಲಿ ಪವರ್ ಶೇರಿಂಗ್ ಹಾಗೂ ಸಿಎಂ ಸೀಟಿನ ವಿಚಾರವಾಗಿ ತೆರೆ ಎಳೆದಿದ್ದಾರೆ.








