ಪಾರ್ಟಿ ಇಲ್ಲ.. ನ್ಯೂ ಇಯರ್ ಗೆ ಅವಕಾಶವಿಲ್ಲ : ಬೊಮ್ಮಾಯಿ
ಬೆಂಗಳೂರು : ಕೊರೊನಾ ಸೋಂಕು ರೂಪಾಂತರಗೊಂಡಿರುವ ಹಿನ್ನೆಲೆ ಹೊಸ ವರ್ಷ ಆಚರಣೆಗೆ, ಸಾರ್ವಜನಿಕ ಪಾರ್ಟಿಗಳಿಗೆ ಅವಕಾಶವಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಬೊಮ್ಮಾಯಿ, ಕೊರೊನಾ ಹಿನ್ನೆಲೆ ಹೊಸ ವರ್ಷ ಆಚರಣೆಗೆ ಅವಕಾಶವಿಲ್ಲ. ಈ ಬಗ್ಗೆ ನಾಳೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದೇವೆ. ಹೊಸ ವರ್ಷಾಚರಣೆಯ ವೇಳೆ ನಡೆಯುವ ಪಾರ್ಟಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಅವರನ್ನು ಕಂಟ್ರೋಲ್ ಮಾಡುವುದು ಕಷ್ಟವಾಗುತ್ತದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ನ್ಯೂ ಇಯರ್ ಗೆ ಅವಕಾಶ ಇಲ್ಲ. ಹೊರಗಡೆ ಸಾರ್ವಜನಿಕ ಪಾರ್ಟಿಗಳಿಗೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.
ಇದೇ ವೇಳೆ ರೂಪಾಂತರ ಕೊರೊನಾ ವೈರಸ್ ಬಗ್ಗೆ ಮಾತನಾಡಿ, ಯುಕೆಯಿಂದ ಬಂದವರ ವಿಳಾಸ ಪತ್ತೆ ಹಚ್ಚುವ ಮೂಲಕ ಎಲ್ಲರನ್ನೂ ಟ್ರೇಸ್ ಮಾಡಿ, ಟ್ರ್ಯಾಕ್ ಮಾಡುತ್ತಿದ್ದೇವೆ. ಎಲ್ಲರನ್ನೂ ಕೂಡ ಪರೀಕ್ಷೆಗೆ ಒಳಪಡಿಸುತ್ತೇವೆ. ಈಗಾಗಲೇ ಯಾರು ಬಂದಿದ್ದಾರೆ ಎನ್ನುವುದರ ಮಾಹಿತಿ ಟ್ರೇಸ್ ಮಾಡಿದ್ದೇವೆ. ಅವರಿಗೆ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಫೋನ್ ಮೂಲಕ ಹೇಳಿದ್ದೇವೆ ಎಂದು ತಿಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









