ಬೆಂಗಳೂರು: ಏಪ್ರಿಲ್ 20 ನಂತ್ರ ಸಂಚರಿಸಲು ಪಾಸ್ ವ್ಯವಸ್ಥೆ ಇರುವುದಿಲ್ಲ ಎಂದು ಡಿಸಿಎಂ ಡಾ. ಅಶ್ವತ್ ನಾರಾಯಣ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಏಪ್ರಿಲ್ 20 ನಂತ್ರ ಸಂಚರಿಸಲು ಪಾಸ್ ವ್ಯವಸ್ಥೆ ಇರಲ್ಲ, ಆದ್ರೆ ಲಾಕ್ ಡೌನ್ ಯಥಾಪ್ರಕಾರ ಮುಂದುವರೆಯಲಿದೆ. ಐಟಿ ನೌಕರರ ಓಡಾಟಕ್ಕೆ ಪಾಸ್ ಅಗತ್ಯ ಇರುವುದಿಲ್ಲ. ಶೇಕಡಾ 50ರಷ್ಟು ಐಟಿ ನೌಕರರು ಕೆಲಸಕ್ಕೆ ಹಾಜರಾಗಲು ಅನುಮತಿ ನೀಡಲಾಗಿದೆ. ಕಂಪನಿಗಳಲ್ಲಿ ಥರ್ಮಲ್ ಟೆಸ್ಟಿಂಗ್ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.
ಇನ್ನು ಐಟಿ ಕಂಪನಿ ಬಸ್ ವ್ಯವಸ್ಥೆ ಕೇಳಿದ್ರೆ ಬಿಎಂಟಿಸಿ ಬಸ್ ಕಾಂಟ್ರಾಕ್ಟ್ ಪಡೆದು ಸ್ಯಾನಿಟೈಸ್ ಮಾಡಿದ ಬಸ್ ಅನ್ನು ನೀಡುತ್ತೇವೆ. ಕೊರೊನಾ ನಿಯಂತ್ರಣಕ್ಕೆ ಈಗಾಗಲೆ ಲಾಕ್ ಡೌನ್ ಮಾಡಲಾಗಿದೆ. ಆದರೆ ಇದು ಎಷ್ಟು ದಿನ ಅನ್ನೋದು ಗೊತ್ತಿಲ್ಲ. ಹೀಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವು ಕೆಲಸ ಕಾರ್ಯ ಆರಂಭಿಸಬೇಕಿದೆ ಎಂದು ಹೇಳಿದರು.








