ಕರಾಚಿ : ಕೊರೊನಾ ವೈರಸ್ ಸೋಂಕು ವಿಶ್ವವನ್ನೇ ನರಕಕ್ಕೆ ನೂಕಿದೆ. ಹೆಮ್ಮಾರಿ ಹೊಡೆತಕ್ಕೆ ಜನರ ಬದುಕು ಬರ್ಬಾದ್ ಆಗಿಬಿಟ್ಟಿದೆ. ಕೊರೊನಾ ಹಿನ್ನೆಲೆ ಪಾಕಿಸ್ತಾನದ ಹಲವೆಡೆ ಸಾರಿಗೆ ವ್ಯವಸ್ಥೆಯನ್ನು ಬಂದ್ ಮಾಡಲಾಗಿದೆ. ಇದಿರಂದ ದಿನನಿತ್ಯದ ದುಡಿಮೆಯನ್ನೆ ನಂಬಿಕೊಂಡಿರುವ ಮಂದಿ, ಒಪ್ಪೊತ್ತಿನ ಊಟವೂ ಸಿಗದೆ ಪರದಾಡುವಂತಾಗಿದೆ. ಅಂತಹ ಬಡ ಕಾರ್ಮಿಕರನ್ನು ಹುಡುಕಿ ಎನ್‌ಜಿಒ, ಉಚಿತ ಊಟ ಹಾಗೂ ರೇಷನ್ ನೀಡುತ್ತಿದೆ. ಇದಕ್ಕಾಗಿ ರೇಷನ್ ಕಾರ್ಡ್ ಗಳನ್ನು ನೀಡುವಾಗ ಎನ್ ಜಿಒನ ಸಿಬ್ಬಂದಿ ಹಿಂದೂ ಹಾಗೂ ಕ್ರಿಶ್ಚಿಯನ್ನರ ಮನೆಗಳಿಗೆ ಭೇಟಿಯೇ ನೀಡುತ್ತಿಲ್ಲವಂತೆ.
ಈ ಬಗ್ಗೆ 54 ವರ್ಷದ ಕ್ರಿಶ್ಚಿಯನ್ ಫಾರೂಕ್ ಮಾಸಿಹ್ ಎಂಬುವವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ನಮ್ಮ ಬಡಾವಣೆಯಲ್ಲಿ ನೂರಾರು ರೇಷನ್ ಕಾರ್ಡ್ ಗಳನ್ನು ಹಂಚಿರುವ ಎನ್ ಜಿಒನ ಸದಸ್ಯರು, ಹಿಂದೂ ಹಾಗೂ ಕ್ರಿಶ್ಚಿಯನ್ನರ ಮನೆಗಳಿಗೆ ಭೇಟಿಯು ನೀಡದೇ ಹಾಗೇ ಹೋಗುತ್ತಿದ್ದಾರೆ ಎಂದು ದೂರಿದ್ದಾರೆ.
ಇನ್ನೊಂದೆಡೆ ಎನ್ ಜಿಒನ ತಾರತಮ್ಯಕ್ಕೆ ಸ್ಥಳೀಯ ಮುಸ್ಲಿಮರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ನಡೆಯು ಸರಿಯಾದುದಲ್ಲ. ಬೇರೆ ಧರ್ಮಿಯಾದರೇ ಏನಂತೆ, ಅವರು ಕೂಡ ಪಾಕಿಸ್ತಾನದ ಪ್ರಜೆಯೇ ಅಲ್ಲವೆ ಅವರುಗಳು ಕೊರೊನಾ ವೈರಸ್ ನ ಹರಡುವಿಕೆಯಿಂದ ಆದ ಸಂಕಷ್ಟದಿಂದ ಬಳಲುತ್ತಿಲ್ಲವೆ ಎಂದು ಪ್ರಶ್ನಿಸಿದ್ದಾರೆ.








