ಸರಕಾರಕ್ಕೆ ಕಟ್ಟಬೇಕಿದ್ದ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವ ಕಂಪೆನಿಗಳ ವಿರುದ್ಧ ಸುಪ್ರೀಂ ಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ತನ್ನ ಆದೇಶದ ಹೊರತಾಗಿಯೂ ಎಜಿಆರ್ ಪಾವತಿಸದ ಕಂಪೆನಿಗಳಿಗೆ ದೇಶದಲ್ಲಿ ಕಾನೂನು ಇದೆಯೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಬಾಕಿಯನ್ನು ಕಟ್ಟಲೇಬೇಕು ಎಂದು ಭಾರ್ತಿ ಏರ್‌ಟೆಲ್, ವೊಡಾಪೋನ್ ಐಡಿಯಾ ಹಾಗೂ ಟಾಟಾ ಟೆಲಿಸರ್ವಿಸಸ್ ಗೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಕಳೆದ ತಿಂಗಳು ಇದೇ ತೀರ್ಪನ್ನು ಮತ್ತೆ ನೀಡಲಾಗಿತ್ತು.
ಆದರೆ ಪಾವತಿಗೆ ಮತ್ತಷ್ಟು ಕಾಲಾವಕಾಶ ಕೋರಿ ದೂರಸಂಪರ್ಕ ಕಂಪನಿಗಳು ಅರ್ಜಿ ಸಲ್ಲಿಸಿದ್ದವು. ಅಲ್ಲದೆ ದೂರಸಂಪರ್ಕ ಇಲಾಖೆಯ ಅಧಿಕಾರಿಯೊಬ್ಬ, ಸಾಂವಿಧಾನಿಕ ಹುದ್ದೆಗಳಲ್ಲಿರುವ ಅಧಿಕಾರಿಗಳಿಗೆ ಪತ್ರ ಬರೆದು, ಬಾಕಿ ಪಾವತಿಸದಂತೆ ಯಾವುದೇ ಕಂಪನಿಯ ಮೇಲೆ ಒತ್ತಡಹೇರಬಾರದು ಮತ್ತು ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದು ಆಗ್ರಹಿಸಿದ್ದರು.
ನ್ಯಾ. ಅರುಣ್ ಮಿಶ್ರಾ, ಎಸ್. ಅಬ್ದುಲ್ ನಜೀರ್ ಮತ್ತು ನ್ಯಾ. ಎಂ.ಆರ್.ಶಾ ಅವರುಳ್ಳ ನ್ಯಾಯಾಪೀಠ ಅರ್ಜಿಯ ವಿಚಾರಣೆ ನಡೆಸಿದರು.
ನ್ಯಾಯಾಲಯದ ಆದೇಶ ಉಲ್ಲಂಘಿಸಿರುವ ಕಂಪೆನಿಗಳನ್ನು ಹಾಗೂ ಕಂಪೆನಿಗಳ ಪರವಾಗಿ ವರ್ತಿಸಿರುವ ಅಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ತಕ್ಷಣವೇ ಬಾಕಿ ಪಾವತಿಸುವಂತೆ ತಾಕೀತು ಮಾಡಿದೆ.
ಕಂಪೆನಿಗಳ ಹಿತಾಸಕ್ತಿಗೆ ಅನುಸಾರವಾಗಿ ವರ್ತಿಸಿರುವ ಅಧಿಕಾರಿಯನ್ನು ಸುಪ್ರೀಂ ಕೋರ್ಟ್ ತನ್ನ ಆದೇಶ ಧಿಕ್ಕರಿಸುವಂಥ ಪರಮಾಧಿಕಾರ ಹೇಗೆ ಬಂತು ಎಂದು ಪ್ರಶ್ನಿಸಿದೆ. ಕೋರ್ಟ್ ನ ಆದೇಶಪಾಲನೆಗೆ ಅಧಿಕಾರಿಯೊಬ್ಬ ಅಡ್ಡಗಾಲು ಹಾಕುತ್ತಾನೆಂದರೆ ಈ ದೇಶದಲ್ಲಿ ಕಾನೂನು ಇದೆಯೇ ಎಂದು ಕಿಡಿಕಾರಿದೆ.
8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ
ಸದಾ ನಗುಮುಖದಿಂದಲೇ ಎಲ್ಲರ ಮನಸ್ಸು ಗೆದ್ದಿರುವ ರಶ್ಮಿಕಾ ಮಂದಣ್ಣ ಇದೀಗ ತೀವ್ರವಾಗಿ ಗರಂ ಆಗಿದ್ದಾರೆ. ಸಿನಿಮಾ ರಂಗಕ್ಕೆ ಕಾಲಿಟ್ಟಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್, ನೆಗೆಟಿವ್ ಕಮೆಂಟ್...








