ರೈಲಿನಲ್ಲಿ ಸಿಗರೇಟ್ ಸೇದುವ ಮುನ್ನ ಎಚ್ಚರ… ಎಚ್ಚರ…!
ನವದೆಹಲಿ : ಇನ್ಮುಂದೆ ರೈಲಿನಲ್ಲಿ ಧೂಮಪಾನ ಮಾಡಿದ್ರೆ ಭಾರಿ ಪ್ರಮಾಣದ ವೆಚ್ಚ ಭರಿಸಬೇಕಾಗಬಹುದು. ಹೌದು ರೈಲಿನಲ್ಲಿ ಧೂಮಪಾನ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಶತಾಬ್ದಿ ಎಕ್ಸ್ ಪ್ರೆಸ್ ಕೋಚ್ ನಲ್ಲಿ ಇತ್ತೀಚೆಗೆ ಅಗ್ನಿ ಅವಘಡ ಸಂಭವಿಸಿದ್ದರ ಬಗ್ಗೆ ತನಿಖೆ ನಡೆಸಿದ ಬಳಿಕ, ಸಿಗರೇಟ್ ಸ್ಟಬ್ ಗಳಿಂದ ಈ ಅವಘಡ ಸಂಭವಿಸಿದೆ ಎಂಬುದು ತಿಳಿದುಬಂದಿತ್ತು. ಈ ಹಿನ್ನೆಲೆ ಧೂಮಪಾನ ಸಂಬಂಧಿತ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ವಿಧಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ.
ಮಾರ್ಚ್ 13ರಂದು ಉತ್ತರಾಖಂಡದ ರೈವಾಲಾ ಬಳಿ ಈ ಬೆಂಕಿ ಅವಘಡ ಸಂಭವಿಸಿತ್ತು. ದೆಹಲಿ-ಡೆಹ್ರಾಡೂನ್ ಶತಾಬ್ದಿ ಸ್ಪೆಷಲ್ ರೈಲಿನ ಎಸ್ 5 ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಡಸ್ಟ್‌ಬಿನ್‌ನಲ್ಲಿ ಎಸೆದ ಸಿಗರೇಟ್ ಮತ್ತು ಬೀಡಿ ಸ್ಟಬ್‌ಗಳು ಟಿಶ್ಯೂ ಪೇಪರ್ ನಿಂದ ಬೆಂಕಿ ಹೊತ್ತಿಕೊಂಡಿತ್ತು ಎಂಬ ಮಾಹಿತಿ ಸಿಕ್ಕಿದೆ.
ಪ್ರಸ್ತುತ, ರೈಲಿನಲ್ಲಿ ಸಿಗರೇಟ್ ಅಥವಾ ಬೀಡಿ ಧೂಮಪಾನ ಮಾಡುವುದು ರೈಲ್ವೆ ಕಾಯ್ದೆಯ ಸೆಕ್ಷನ್ 167ರ ಅಡಿ ಅಪರಾಧವಾಗಿದೆ. ಈ ಅಪರಾಧಕ್ಕೆ ವಿಧಿಸಲಾಗುವ ದಂಡದ ಮೊತ್ತ ಕೇವಲ 100 ರೂ.ಯಾಗಿದೆ. ಇತ್ತೀಚೆಗೆ ರೈಲ್ವೆ ಮಂಡಳಿ ಸದಸ್ಯರು ಮತ್ತು ವಲಯಗಳ ವ್ಯವಸ್ಥಾಪಕರ ಸಭೆಯಲ್ಲಿ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು, ಅಪರಾಧದ ಬಗ್ಗೆ ಜಾಗೃತಿ ಮೂಡಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೆಲವು ಜನರ ತಪ್ಪಿನಿಂದಾಗಿ ಇತರ ಪ್ರಯಾಣಿಕರು ತೊಂದರೆ ಅನುಭವಿಸದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆ ಕಠಿಣ ಕ್ರಮ ದಂಡ ಪ್ರಮಾಣ ಹೆಚ್ಚಳ ಜೊತೆಗೆ ಜೈಲು ಶಿಕ್ಷೆ ವಿಧಿಸುವ ನಿಯಮ ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿರೋದಾಗಿ ಗೊತ್ತಾಗಿದೆ.
ನಟಿ ಪ್ರೀತಿ ಜಿಂಟಾಗೆ ಕಿಸ್ ಮಾಡಿದ ರಿತೇಶ್, ಕೊಪಗೊಂಡು ಪತಿಗೆ ಹೊಡೆತ ನೀಡಿದ ಜೆನಿಲಿಯಾ !