NO TIME TO DIE: ಜೇಮ್ಸ್ ಬಾಂಡ್ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ…
ಜೇಮ್ಸ್ ಬಾಂಡ್ ಸರಣಿಯ ‘ನೋ ಟೈಮ್ ಟು ಡೈ’ ಸಿನಿಮಾ ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈಗ ಈ ಚಿತ್ರ ಮಾರ್ಚ್ 4 ರಿಂದ OTT ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಲಿದೆ. ನೋ ಟೈಮ್ ಟು ಡೈ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿ ಆರು ಭಾಷೆಗಳಲ್ಲಿ ತೆರೆಕಾಣಲಿದೆ.
some men need no introduction🤵🍸
watch #NoTimeToDieOnPrime on March 4
in English, Hindi, Kannada, and Malayalam pic.twitter.com/xnCdD7RkQw— prime video IN (@PrimeVideoIN) February 10, 2022
ಜೇಮ್ಸ್ ಬಾಂಡ್ ಫ್ರಾಂಚೈಸ್‌ನಲ್ಲಿ ನಿರ್ಮಾಣವಾಗಿರುವ 25 ನೇ ಚಿತ್ರ ಮತ್ತು ಡೇನಿಯಲ್ ಕ್ರೇಗ್ ಅವರ ಕೊನೆಯ ಬಾಂಡ್ ಚಿತ್ರ ನೋ ಟೈಮ್ ಟು ಡೈ 2021 ರ ಅತ್ಯಂತ ಯಶಸ್ವಿ ಚಲನಚಿತ್ರಗಳಲ್ಲಿ ಒಂದಾಗಿದೆ. ಇದು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ $770 ಮಿಲಿಯನ್‌ಗಿಂತಲೂ ಹೆಚ್ಚು ಗಳಿಕೆಯನ್ನ ಮಾಡಿತ್ತು.
ವಿಶ್ವದ ನಂಬರ್ ಒನ್ ಸ್ಪೈ ಫ್ರಾಂಚೈಸಿ ಎಂದು ಪರಿಗಣಿಸಲ್ಪಟ್ಟಿರುವ ಎಲ್ಲಾ ಜೇಮ್ಸ್ ಬಾಂಡ್ ಚಲನಚಿತ್ರಗಳನ್ನು ಈಗ ಭಾರತದ ಪ್ರೇಕ್ಷಕರು ಮನೆಯಲ್ಲೆ ಕುಳಿತು ಮೊಬೈಲ್‌ನಲ್ಲಿ ವೀಕ್ಷಿಸಬಹುದು. ಜೇಮ್ಸ್ ಬಾಂಡ್ ಚಿತ್ರಗಳಿಂದ ಕಳೆದ ನಾಲ್ಕು ತಲೆಮಾರುಗಳ ಕಾಲ ಸಿನಿ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗಿರುವ ಎಂಜಿಎಂ ಕಂಪನಿ ತಮ್ಮ ಹಕ್ಕುಗಳನ್ನ ಕಳೆದ ವರ್ಷ ಅಮೆಜಾನ್‌ಗೆ ನೀಡಿದೆ.
$ 8.45 ಶತಕೋಟಿಯ ಈ ಒಪ್ಪಂದದ ನಂತರ, ಈಗ ಈ ಜೇಮ್ಸ್ ಬಾಂಡ್ ಚಲನಚಿತ್ರಗಳನ್ನು Amazon ನ ವೀಡಿಯೊ ಸ್ಟ್ರೀಮಿಂಗ್ ಸೇವೆ Amazon prime – ನಲ್ಲಿ ನೋಡಬಹುದಾಗಿದೆ.







