ಉಕ್ರೇನ್ ರಷ್ಯಾ ಮತ್ತು ಬೆಲಾರಸ್ ಮಾನವ ಹಕ್ಕುಗಳ ಹೋರಾಟಗಾರರಿಗೆ ನೊಬೆಲ್ ಶಾಂತಿ ಪ್ರಶಸ್ತಿ…
ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಬೆಲಾರಸ್‌ನ ಮಾನವ ಹಕ್ಕುಗಳ ವಕೀಲ ಅಲೆಸ್ ಬಿಲಿಯಾಟ್ಸ್ಕಿ, ರಷ್ಯಾದ ಮಾನವ ಹಕ್ಕುಗಳ ಸಂಸ್ಥೆ ಮತ್ತು ಉಕ್ರೇನಿಯನ್ ಮಾನವ ಹಕ್ಕುಗಳ ಸಂಸ್ಥೆ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ ಅವರಿಗೆ ನೀಡಲಾಗಿದೆ.
ಓಸ್ಲೋದಲ್ಲಿ ನಾರ್ವೇಜಿಯನ್ ನೊಬೆಲ್ ಸಮಿತಿಯ ಅಧ್ಯಕ್ಷ ಬೆರಿಟ್ ರೀಸ್ ಆಂಡರ್ಸನ್ ವಿಜೇತರ ಹೆಸರನ್ನು ಘೋಷಿಸಿದರು.
ಇನ್ನೂ ಅಲೆಸ್ ಬಿಲಿಯಾಟ್ಸ್ಕಿಯ ವಿವರಗಳನ್ನ ನೋಡುವುದಾದರೇ…. ಸೆಪ್ಟೆಂಬರ್ 25, 1962 ರಂದು ರಷ್ಯಾದ ಕರೇಲಿಯಾದ ವ್ಯಾರ್ಟ್ಸಿಲಿಯಾದಲ್ಲಿ ಜನಿಸಿದ ಬಿಲಿಯಾಟ್ಸ್ಕಿ ಪ್ರಶಸ್ತಿಯ ಸಮಯದಲ್ಲಿ ಬೆಲಾರಸ್ ನಿವಾಸಿಯಾಗಿದ್ದರು. 1980 ರ ದಶಕದ ಮಧ್ಯಭಾಗದಲ್ಲಿ ಬೆಲಾರಸ್‌ನಲ್ಲಿ ಹೊರಹೊಮ್ಮಿದ ಪ್ರಜಾಪ್ರಭುತ್ವ ಚಳುವಳಿಯ ಪ್ರಾರಂಭಿಕರಲ್ಲಿ ಬಿಲಿಯಾಟ್ಸ್ಕಿ ಒಬ್ಬರು.
ಬಿಲಿಯಾಟ್ಸ್ಕಿ ತಮ್ಮ ತಾಯ್ನಾಡಿನಲ್ಲಿ ಪ್ರಜಾಪ್ರಭುತ್ವ ಮತ್ತು ಶಾಂತಿಯುತ ಅಭಿವೃದ್ಧಿಯನ್ನು ಉತ್ತೇಜಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.
Nobel Peace Prize Awarded to Human Rights Advocates from Ukraine, Russia and Belarus