ಭಾರತದ ವಿರುದ್ಧ ಮಾಸ್ಟರ್ ಪ್ಲಾನ್ : ‘ಹುಚ್ಚ’ ಕಿಮ್ – ಇಮ್ರಾನ್ ಖಾನ್ ಜೊತೆ ಕೈಜೋಡಿಸಿದ ಶಕುನಿ ಚೀನಾ..!
ಉತ್ತರ ಕೊರಿಯಾದ ಹುಚ್ಚ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಜೊತೆಗೆ ಭಾರತದ ಬದ್ಧ ವೈರಿ ರಾಷ್ಟ್ರ ಪಾಕಿಸ್ತಾನ ಗಾಢವಾಗುತ್ತಾ ಹೋಗುತ್ತಿದೆ. ಭಾರತದ ವಿರುದ್ಧ ರಣತಂತ್ರವನ್ನ ಹೆಣೆಯುತ್ತಿರುವುದು ಗೊತ್ತಿರುವ ವಿಚಾರವೇ ಜೊತೆಗೆ . ಇವರಿಬ್ಬರ ನಡುವೆ ನನ್ನದೂ ಪಾತ್ರವಿರಲಿ ಅನ್ನೋ ಹಾಗೆ ಶಕುನಿ ಚೀನಾವೂ ಇಮ್ರಾನ್ ಖಾನ್ ಹಾಗೂ ಕಿಮ್ ಜಾಂಗ್ ಉನ್ ಜೊತೆಗೂಡಿ ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ವಿಚಾರವೂ ಎಲ್ಲರಿಗೂ ಗೊತ್ತಿರುವುದೇ..
ಹೇಳಿ ಕೇಳಿ ಉತ್ತರ ಕೊರಿಯಾದಲ್ಲಿ ಅಲ್ಲಿನ ಜನರಿಗೆ ಒಂದು ಹೊತ್ತಿನ ಊಟ ಸಿಗುತ್ತೋ ಇಲ್ವೋ.. ಆದ್ರೆ ಪರಮಾಣು ಬಾಂಬ್ ಹಾಗೂ ಮಿಸೈಲ್ ಗಳಿಗೆ ಆ ಹುಚ್ಚನ ಸಾಮ್ರಾಜ್ಯದಲ್ಲಿ ಯಾವುದೇ ಕೊರತೆಯಿಲ್ಲ. ಹೀಗಾಗಿ ಇದು ಸಹಕವಾಗಿಯೇ ಆತಂಕಕಾರಿ ವಿಷಯವೂ ಹೌದು..
ಇದೀಗ ಕಳೆದ 3 ವರ್ಷಗಳಲ್ಲಿ ಉತ್ತರ ಕೊರಿಯಾದ 1718 ಹಡಗುಗಳು ವಿಶ್ವದ ವಿವಿಧ ದೇಶಗಳಿಗೆ ರಹಸ್ಯವಾಗಿ ಹೋಗಿ ಬಂದಿರೋ ವಿಚಾರ ಗೊತ್ತಾಗಿದೆ. ಇವುಗಳಲ್ಲಿ ಎಷ್ಟು ಚೀನಾ ಮತ್ತು ಪಾಕಿಸ್ತಾನಕ್ಕೆ ಹೋಗಿವೆ. ಅದ್ರಲ್ಲಿ ಏನೆಲ್ಲಾ ವಸ್ತುಗಳನ್ನು ಸಾಗಿಸಲಾಗಿದೆ ಅನ್ನೋ ವಿಚಾರ ಈವರೆಗೂ ಸ್ಪಷ್ಟವಾಗಿಲ್ಲ. ಈ ವಿಚಾರವಾಗಿ ಅಮೆರಿಕ ಮತ್ತು ಭಾರತ ಸೇರಿದಂತೆ ಹಲವು ದೇಶಗಳು ಆತಂಕ ವ್ಯಕ್ತಪಡಿಸಿವೆ.
2020ರ ಮೇನಲ್ಲಿ ಜರ್ಮನ್ನ ವರದಿಯೊಂದರಲ್ಲಿ ಚೀನಾ, ಉತ್ತರ ಕೊರಿಯಾ ಮತ್ತು ಪಾಕಿಸ್ತಾನ ಒಟ್ಟಾಗಿ ಸೇರಿಕೊಂಡು ಪರಮಾಣು, ಜೈವಿಕ ಮತ್ತು ರಾಸಾಯನಿಕ ಶಸ್ತ್ರಾಸ್ತ್ರಗಳ ವಿಚಾರವಾಗಿ ಒಪ್ಪಂದ ಏರ್ಪಟ್ಟಿದೆ ಅಂತ ಮಾಹಿತಿ ನೀಡಲಾಗಿತ್ತು.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.