ಜಪಾನ್ ಸಮುದ್ರದ ಮೇಲೆ ಕ್ಷಿಪಣಿ ಹಾರಿಸಿದ ಉತ್ತರ ಕೋರಿಯಾ..
ಜಪಾನ್ ಸಮುದ್ರದಲ್ಲಿ ಉತ್ತರ ಕೊರಿಯಾ ಮತ್ತೊಮ್ಮೆ ಕ್ಷಿಪಣಿ ಪರೀಕ್ಷೆ ನಡೆಸಿದೆ. ಗುರುವಾರ ಬೆಳಗ್ಗೆ ಈ ಪರೀಕ್ಷೆ ನಡೆದಿದೆ., ಇದು ಈ ವರ್ಷ ಉತ್ತರ ಕೊರಿಯಾ ನಡೆಸಿದ ಆರನೇ ಕ್ಷಿಪಣಿ ಪರೀಕ್ಷೆಯಾಗಿದೆ. ಈ ವರ್ಷದ ಆರಂಭದಲ್ಲಿ, ಉತ್ತರ ಕೊರಿಯಾ ಈ ವರ್ಷದ ಮೊದಲ ಪರೀಕ್ಷೆಯನ್ನು ಜನವರಿ 6 ರಂದು ನಡೆಸಿತು ಮತ್ತು ಅದರ ನಂತರ ಜನವರಿ 11 ರಂದು ಅದು ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಸಹ ಪರೀಕ್ಷಿಸಿತು, ಆದರೆ ಜನವರಿ 17 ರಂದು ಕೊನೆಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷಿಸಲಾಯಿತು.
ಉತ್ತರ ಕೊರಿಯಾದ ಮೇಲೆ ನಿರ್ಬಂಧಗಳನ್ನು ಹೇರುವಂತೆ ಯುನೈಟೆಡ್ ಸ್ಟೇಟ್ಸ್ ವಿಶ್ವಸಂಸ್ಥೆಗೆ ಮನವಿ ಮಾಡಿತ್ತು, ಆದರೆ ಅದರ ಪ್ರಯತ್ನಗಳನ್ನು ಚೀನಾ ಮತ್ತು ರಷ್ಯಾ ತಡೆಯಿತು. ಅದೇ ಸಮಯದಲ್ಲಿ, ಮಾಧ್ಯಮ ವರದಿಗಳ ಪ್ರಕಾರ, ದಕ್ಷಿಣ ಕೊರಿಯಾ ಮತ್ತು ಅಮೆರಿಕದ ಗುಪ್ತಚರ ಅಧಿಕಾರಿಗಳು ಈ ಉಡಾವಣೆಗಳನ್ನು ವಿಶ್ಲೇಷಿಸುತ್ತಿದ್ದಾರೆ,
ಇಂತಹ ಕ್ಷಿಪಣಿ ಪರೀಕ್ಷೆಗಳನ್ನು ನಡೆಸುವ ಮೂಲಕ ಉತ್ತರ ಕೊರಿಯಾ ಅಮೆರಿಕಕ್ಕೆ ಬಹಿರಂಗವಾಗಿ ಸವಾಲು ಹಾಕುತ್ತಿದೆ. ವಾಸ್ತವವಾಗಿ, ಉತ್ತರ ಕೊರಿಯಾದ ಮೇಲೆ ಅನೇಕ ನಿರ್ಬಂಧಗಳನ್ನು ಹೇರಲು ಯುಎಸ್ ಪ್ರಯತ್ನಿಸುತ್ತಿದೆ, ಜೊತೆಗೆ ಪರಮಾಣು ಕಾರ್ಯಕ್ರಮವನ್ನು ನಿಲ್ಲಿಸಲು ಒತ್ತಡವನ್ನು ಮಾಡಲಾಗುತ್ತಿದೆ. ಇದೀಗ ಉತ್ತರ ಕೊರಿಯಾ ಇಂತಹ ಪರೀಕ್ಷೆಯ ಮೂಲಕ ಅಮೆರಿಕದ ನಿರ್ಬಂಧಗಳಿಂದ ದಮನವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.








