
ಉತ್ತರ ಕೊರಿಯಾದ ಅಧ್ಯಕ್ಷ ಕ್ರೂರ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯ ತೀವ್ರ ಹದಗೆಟ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಿಮ್ ಹಾಸಿಗೆ ಮೇಲಿಂದ ಏಳಲಾಗದ ಸ್ಥಿತಿಯಲ್ಲಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ ಎಂಬ ಮಾಹಿತಿ ಅಮೆರಿಕಾ ಗುಪ್ತಚರ ಅಧಿಕಾರಿಗಳಿಗೆ ಸಿಕ್ಕಿದೆ.
ಅಂದಹಾಗೆ ಇತ್ತೀಚೆಗೆ ಕಿಮ್ ಪಡೆದ ಶಸ್ತ್ರಚಿಕಿತ್ಸೆಯ ಕುರಿತು ಉತ್ತರ ಕೊರಿಯಾ ದಿನ ಪತ್ರಿಕೆ ಡೈಲಿ ಎನ್ ಕೆ ಸುದ್ದಿ ಮಾಡಿತ್ತು. ಇದೇ ಏಪ್ರಿಲ್ 12ನೇ ತಾರೀಕಿನಂದು ಕಿಮ್ ಜಾಂಗ್ ಉನ್ ಅತೀ ಗಂಭೀರ, ಹಾಗೂ ಸೂಕ್ಷ್ಮಾತೀಸೂಕ್ಷ್ಮ ಶಸ್ತ್ರ ಚಿಕತ್ಸೆಯಾದ ಕಾರ್ಡಿಯೋ ವ್ಯಾಸ್ಕೂಲರ್ ಸಿಸ್ಟಮ್ ಪ್ರೊಸೀಜರ್ ಗೆ ಒಳಗಾಗಿದ್ದರು. ಅದಾದ ಬಳಿಕ ಕಿಮ್ ಚೇತರಿಸಿಕೊಳ್ಳುವುದು ತುಂಬಾನೇ ಕಷ್ಟಕರವಾಗಿದೆ ಎಂದು ಹೇಳಲಾಗ್ತಿದೆ.
ಶಸ್ತ್ರಚಿಕಿತ್ಸೆ ಬಳಿಕ ಏಪ್ರಿಲ್ 15ರಂದು ನಡೆದ ತಮ್ಮ ತಾತನ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಕಿಮ್ ಗೈರಾಗಿದ್ದರು. ಇದು ಕಿಮ್ ಆರೋಗ್ಯದ ಬಗ್ಗೆ ಮತ್ತಷ್ಟು ಅನುಮಾನಗಳು ಹುಟ್ಟುವಂತೆ ಮಾಡಿದೆ.
ಇನ್ನು, ಸಿಗರೇಟ್ ಚಟಕ್ಕೆ ದಾಸನಾಗಿದ್ದ ಕಿಮ್ ಜಾಂಗ್ ಉನ್ ಹೆಚ್ಚಾಗಿ ಧೂಮಪಾನ ಮಾಡುತ್ತಿದ್ದರು. ಅಲ್ಲದೇ, ಒಬೆಸಿಟಿ ಸಮಸ್ಯೆ, ಹಾಗೂ ವರ್ಕ್ ಟೆನ್ಶನ್ ಕೂಡ ಕಿಮ್‌ರನ್ನ ಕಾಡಿತ್ತು. ಈ ಮೂರೂ ಸಮಸ್ಯೆಗಳೂ ಕಿಮ್ ಜಾಂಗ್ ಉನ್ ಆರೋಗ್ಯಕ್ಕೆ ಮುಳುವಾಯ್ತು ಅಂತಾ ಹೇಳಲಾಗಿದೆ.








