ಉತ್ತರ ಕೊರಿಯಾದಲ್ಲಿ ಅಭಿವೃದ್ಧಿ ಪಡಿಸಲಾದ ಬ್ಯಾಲಿಸ್ಟಿಕ್ ಕ್ಷಿಪಣಿ ವಿಶ್ವದ ಅತ್ಯಂತ ಶಕ್ತಿಶಾಲಿ ಅಸ್ತ್ರವಂತೆ..!
ಉತ್ತರ ಕೊರಿಯಾ: ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಆ ದೇಶದ ಅಭಿವೃದ್ಧಿ, ಜನರ ಹಿತಾಸಕ್ತಿಗಿಂತಲೂ , ಕ್ಷಪಣಿ , ಪರಮಾಣು ಬಾಂಬ್ ಗಳ ಬಗ್ಗೆಯೇ ಹೆಚ್ಚು ತಲೆ ಕೆಡಿಸಿಕೊಳ್ಳೋದು ಅನ್ನೋ ವಿಚಾರ ವಿಶ್ವಕ್ಕೆ ಗೊತ್ತಿದೆ. ಇಂತಹದ್ದೇ ಒಂದು ಹೊಸ ಸೆಬ್ಮೆರಿನ್ ಉಡಾವಣಾ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಇದೀಗ ಉತ್ತರ ಕೊರಿಯಾದಲ್ಲಿ ಅಭಿವೃದ್ಧಿಪಡಿಸಿದೆ. ಇನ್ನೂ ಉತ್ತರ ಕೊರಿಯಾದ ಮಾಧ್ಯಮಗಳು ಹೊಸ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ‘ವಿಶ್ವದ ಅತ್ಯಂತ ಶಕ್ತಿಶಾಲಿ ಅಸ್ತ್ರ’ ಎಂದು ಬಣ್ಣಿಸಿವೆ.
ಟ್ರಂಪ್ ಆಡಳಿತದ ವೈಫಲ್ಯಗಳಿಂದ ಜೋ ಬೈಡನ್ ಪಾಠ ಕಲಿಯಲಿ : ಮೂನ್
ಇತ್ತೀಚೆಗಷ್ಟೇ ಕಿಮ್ ಜೊಂಗ್ ಉನ್ ಹೊಸ ಕ್ಷಿಪಣಿಗಳನ್ನು ಪ್ರದರ್ಶಿಸುವ ಮಿಲಿಟರಿ ಮೆರವಣಿಗೆಯನ್ನು ಮಾಡುವ ಮೂಲಕ ಗಮನ ಸೆಳೆದಿದ್ದರು. ಯಾಕಂದ್ರೆ ಅಮೆರಿಕಾದಲ್ಲಿ ಜೋ ಬಿಡೆನ್ ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಕೆಲವೇ ದಿನಗಳ ಮೊದಲು ಉತ್ತರ ಕೊರಿಯಾದ ಮಿಲಿಟರಿ ಪ್ರದರ್ಶನ ಮಾಡಿರುವುದು ಕುತೂಹಲಕ್ಕೂ ಕಾರಣವಾಗಿದೆ. ಅದು ಅಲ್ಲದೇ ರಾಜಸಭೆಯಲ್ಲಿ ಭಾಗಿಯಾಗಿದ್ದ ಕಿಮ್ ಅಮೆರಿಕಾ ತನ್ನ ಬಹುದೊಡ್ಡ ಶತ್ರು ರಾಷ್ಟ್ರವೆಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದನ್ನೂ ನಾವಿಲ್ಲಿ ಸ್ಮರಿಸಬಹುದು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








