ರಾಜಕೀಯಕ್ಕಾಗಿ ಪಾದಯಾತ್ರೆಯಲ್ಲ.. ರಾಜ್ಯದ ಹಿತಕ್ಕಾಗಿ ಪಾದಯಾತ್ರೆ : ಸಿದ್ದರಾಮಯ್ಯ
ರಾಮನಗರ : ನಾವು ರಾಜಕೀಯಕ್ಕಾಗಿ ಮೇಕೆದಾಟು ಪಾದಯಾತ್ರೆಯನ್ನು ಮಾಡುತ್ತಿಲ್ಲ, ಬದಲಾಗಿ ರಾಜ್ಯದ ಹಿತಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ಸಂಗಮದಲ್ಲಿ ಚಾಲನೆ ದೊರಕಿದೆ. ಪಾದಯಾತ್ರೆಗೆ ರೈತ ಗೀತೆ ಮೂಲಕವಾಗಿ ಚಾಲನೆ ನೀಡಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದ್ದು, ನಮ್ಮ ನೀರು, ನಮ್ಮ ಹಕ್ಕು ಧ್ಯೇಯದೊಂದಿಗೆ ಕಾಂಗ್ರೆಸ್ ಪಾದಯಾತ್ರೆ ಆರಂಭಿಸಿದೆ.
ಇದಕ್ಕು ಮುನ್ನ ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾವು ಯಾವುದೇ ಕಾನೂನು ಉಲ್ಲಂಘಣೆ ಮಾಡುವುದಿಲ್ಲ.
ಸರ್ಕಾರಿ ಜಾರಿ ಮಾಡಿರುವ ಕೋವಿಡ್ ನಿಯಮ ಪಾಲನೆ ಮಾಡಿಕೊಂಡಿಯೇ ಪಾದಯಾತ್ರೆ ಮಾಡುತ್ತೇವೆ. ನಾವು ಪಾದಯಾತ್ರೆ ಮಾಡುತ್ತಿರುವುದಕ್ಕೆ ಸರ್ಕಾರ ಕರ್ಫ್ಯೂ ವಿಧಿಸಿದೆ ಎಂದು ಆರೋಪಿಸಿದರು.
ಇನ್ನು ಈ ಪಾದಯಾತ್ರೆ ರಾಜ್ಯದ ಹಿತ, ಬೆಂಗಳೂರಿನ ಜನರ ಹಿತಕ್ಕಾಗಿ ಮಾಡುತ್ತಿದ್ದೇವೆ.
ನಮ್ಮ ನೀರು ನಾವು ಬಳಸಿಕೊಳ್ಳುತ್ತೇವೆ ಅಷ್ಟೆ. ಇದರಿಂದ ತಮಿಳುನಾಡಿಗೂ ಅನುಕೂಲ ಆಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.









