ಡಿಜಿಟಲ್ ಪಾವತಿಗಳ ಮೇಲೆ ಶುಲ್ಕ ವಿಧಿಸಲು ಇದುಸರಿಯಾದ ಸಮಯವಲ್ಲ – ಸೀತಾರಾಮನ್..
ಡಿಜಿಟಲ್ ಪಾವತಿಗಳ ಮೇಲೆ ಶುಲ್ಕ ವಿಧಿಸಲು ಇದು ಸರಿಯಾದ ಸಮಯವಲ್ಲ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, “ನಾವು ಡಿಜಿಟಲ್ ಪಾವತಿಯನ್ನು ಸಾರ್ವಜನಿಕರ ಒಳಿತಿಗೆಂದು ನೋಡುತ್ತೇವೆ. ಇದರಿಂದ ಮುಕ್ತವಾಗಿ ಡಿಜಿಟಲ್ ಪ್ರವೇಶಿಸಲು ಸಾಧ್ಯವಾಗುತ್ತದೆ. ಇದರಿಂದ ಭಾರತೀಯ ಆರ್ಥಿಕತೆಯ ಡಿಜಿಟಲೀಕರಣ ಆಕರ್ಷಕವಾಗುತ್ತದೆ. ಹಾಗೆಯೇ ಡಿಜಿಟಲೀಕರಣದ ಮೂಲಕ ನಾವು ಪಾರದರ್ಶಕತೆಯ ಮಟ್ಟವನ್ನು ಸಾಧಿಸುತ್ತೇವೆ. “ಆದ್ದರಿಂದ, ಅದನ್ನು ಶುಲ್ಕ ವಿಧಿಸಲು ಇದು ಸರಿಯಾದ ಸಮಯವಲ್ಲ ಎಂದು ನಾವು ಭಾವಿಸುತ್ತೇವೆ. ಎಂದು ಸಚಿವರು ಸೇರಿಸಿದರು.
ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮೂಲಕ ಮಾಡುವ ವಹಿವಾಟಿನ ಮೇಲೆ ಶ್ರೇಣೀಕೃತ ಶುಲ್ಕಗಳನ್ನು ವಿಧಿಸುವ ಸಾಧ್ಯತೆ ಸೇರಿದಂತೆ ಪಾವತಿ ವ್ಯವಸ್ಥೆಯಲ್ಲಿ ಪ್ರಸ್ತಾಪಿಸಲಾದ ವಿವಿಧ ಬದಲಾವಣೆಗಳ ಕುರಿತು ಸಾರ್ವಜನಿಕರಿಂದ ಪ್ರತಿಕ್ರಿಯೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕೋರಿರುವ ಹಿನ್ನೆಲೆಯಲ್ಲಿ ಸೀತಾರಾಮನ್ ಅವರ ಹೇಳಿಕೆ ಬಂದಿದೆ. ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಸೇವೆಗಳಿಗೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಎಂದು ಭಾರತ ಸರ್ಕಾರ ಕಳೆದ ವಾರ ಘೋಷಿಸಿತು.








