ಟೀಮ್ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ ಶ್ರೀಮಂತನಲ್ಲ..!
ವಿರಾಟ್ ಕೊಹ್ಲಿ…. ವಿಶ್ವ ಕ್ರಿಕೆಟ್ ನ ಸೂಪರ್ ಸ್ಟಾರ್. ಆಧುನಿಕ ಕ್ರಿಕೆಟ್ ಜಗತ್ತಿನ ಹಲವು ದಾಖಲೆಗಳ ಒಡೆಯ. ಟೀಮ್ ಇಂಡಿಯಾದ ಯಶಸ್ವಿ ನಾಯಕ. ಹಾಗೇ ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಕೂಡ ಒಬ್ಬರು. ಪ್ರತಿಷ್ಠಿತ ಫೋಬ್ರ್ಸ್ ಲೀಸ್ಟ್ ನಲ್ಲಿರುವ ಏಕೈಕ ಭಾರತೀಯ ಕ್ರೀಡಾಪಟು. ಅಷ್ಟೇ ಅಲ್ಲ, ವಿರಾಟ್ ಕೊಹ್ಲಿ 2020ರಲ್ಲಿ ಗಳಿಸಿದ್ದ ಒಟ್ಟು ಸಂಪಾದನೆ 26ಮಿಲಿಯನ್ ಡಾಲರ್.
ಆದ್ರೆ ವಿರಾಟ್ ಕೊಹ್ಲಿ ಕ್ರಿಕೆಟ್ ಆಟದಲ್ಲಿ ಗಳಿಸಿರುವ ಸಂಪಾದನೆ ಕಡಿಮೆಯೇ. ಹಾಗಿದ್ರೆ ವಿರಾಟ್ ಕೊಹ್ಲಿಯ ಸಂಪಾದನೆಯ ಮೂಲ ಎಲ್ಲಿ ಅಂತ ಹುಡುಕುತ್ತಾ ಹೋದ್ರೆ ಜಾಹಿರಾತು ಸಂಭಾವಣೆ. ಹಲವಾರು ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುವ ವಿರಾಟ್ ಭಾರತದ ಶ್ರೀಮಂತ ಕ್ರಿಕೆಟಿಗ.
ಇನ್ನು ಕ್ರಿಕೆಟ್ ಸಂಪಾದನೆಯ ಬಗ್ಗೆ ಮಾತನಾಡುವುದಾದ್ರೆ, ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಹೌದು, ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ. ಆದ್ರೆ ಆಟಗಾರರ ಸಂಭಾವನೆಯ ವಿಚಾರದಲ್ಲಿ ಬಿಸಿಸಿಐ ಖಂಜುಸ್.
ಅಂದ ಹಾಗೇ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕ. ಆದ್ರೆ ನಾಯಕನಾಗಿ ವಿರಾಟ್ ಕೊಹ್ಲಿ ಪಡೆಯುತ್ತಿರುವ ಸಂಭಾವಣೆ ವರ್ಷಕ್ಕೆ ಏಳು ಕೋಟಿ. ಅದೇ ರೀತಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜಾಯ್ ರೂಟ್ ವರ್ಷಕ್ಕೆ 7.22 ಕೋಟಿ ಸಂಬಳವನ್ನು ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ, ವಿಶ್ವ ಕ್ರಿಕೆಟ್ ನ ನಾಯಕರ ಸಾಲಿನಲ್ಲಿ ಅತೀ ಹೆಚ್ಚು ಸಂಬಳ ಪಡೆಯುತ್ತಿರುವ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಇನ್ನು ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಟೀಮ್ ಪೈನ್ ಅವರು ಐದು ಕೋಟಿ ರೂಪಾಯಿ ಸಂಬಳ ಪಡೆದ್ರೆ, ಪಾಕಿಸ್ತಾನದ ನಾಯಕ ಬಾಬರ್ ಅಝಮ್ 6.2 ಮೀಲಿಯನ್, ಶ್ರೀಲಂಕಾದ ನಾಯಕ ದಿಮುತ್ ಕರುಣರತ್ನೆ 5.1 ಮಿಲಿಯನ್ ಸಂಭಾವಣೆಯನ್ನು ಪಡೆಯುತ್ತಿದ್ದಾರೆ.
ಇನ್ನು ವಿರಾಟ್ ಕೊಹ್ಲಿಗಿಂತ ಇಂಗ್ಲೆಂಡ್ ನ ವೇಗಿ ಜೋಫ್ರಾ ಆರ್ಚೆರ್ ಹೆಚ್ಚು ಸಂಬಳವನ್ನು ಪಡೆಯುತ್ತಿದ್ದಾರೆ. ಅಂದ್ರೆ ಇಲ್ಲಿ ಬಿಸಿಸಿಐ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿದ್ರೂ ಕೂಡ ಆಟಗಾರರ ವೇತನ ವಿಚಾರದಲ್ಲಿ ಕಡಿಮೆ ಸಂಬಳವನ್ನು ನೀಡುತ್ತಿದೆ.
ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ 17 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಜೊತೆಗೆ ಹಲವು ಜಾಹಿರಾತುಗಳಲ್ಲಿ ನಟಿಸುವ ಮೂಲಕ ತನ್ನ ಬೊಕ್ಕಸವನ್ನು ತುಂಬಿತುಳುಕುವಂತೆ ಮಾಡುತ್ತಿದ್ದಾರೆ.