ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ.. PUC saakshatv
ಬೆಂಗಳೂರು : ರಾಜ್ಯದಲ್ಲಿ ನಿರಂತರ ಮಳೆಯಿಂದಾಗಿ ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಥಮ ಮತ್ತು ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆ ಸಮಯವನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.
ಕಳೆದ ನವೆಂಬರ್ ನಲ್ಲಿ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆ ಕುರಿತು ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ ಪರಿಷ್ಕøತ ಆದೇಶ ಹೊರಡಿಸಿತು.
ಅದರ ಅನುಸಾರವಾಗಿ ಪರೀಕ್ಷೆಗಳು ಬೆಳಗ್ಗೆ 9 ರಿಂದ 12-15ರವೆಗೆ ಮತ್ತು ಮಧ್ಯಾಹ್ನದ ಅವಧಿಯಲ್ಲಿ 2 ರಿಂದ 5-15ರವರೆಗೆ ಪರೀಕ್ಷೆಗಳ ಅವಧಿ ನಿಗದಿಸಲಾಗಿತ್ತು.
ಆದ್ರೆ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿತ್ತಿವೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೇ ಆಗಬಾರದು ಎಂಬ ಕಾರಣ ಇಲಾಖೆ ಪರೀಕ್ಷ ಸಮಯ ಬದಲಾವಣೆ ಮಾಡಿದೆ.
ಪರಿಷ್ಕ್ರತ ವೇಳಾಪಟ್ಟಿ ಪ್ರಕಾರ.. ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆ 09-30 ರಿಂದ ಆರಂಭಿಸಿ ಮಧ್ಯಾಹ್ನ 12-45ರವರೆಗೆ ನಡಡೆಯಲಿದೆ. ಇನ್ನುಳಿದಂತೆ ಎರಡನೇ ಅವಧಿ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ.
ಇದೇ ಡಿಸೆಂಬರ್ 9 ರಿಂದ 23ರವರೆಗೆ ಪರೀಕ್ಷೆಗಳು ನಡೆಯಲಿವೆ.









